ಆಳಂದ: ಸಿಯುಕೆ ಸುಂಟನೂರ ಗ್ರಾಮದಲ್ಲಿ ಹಮ್ಮಿಕೊಂಡ ಯೋಗ ಶಿಬಿರದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿದರು. ಶಿಬಿರಾರ್ಥಿಗಳು ಪ್ರಾಧ್ಯಾಪಕರು ಇದ್ದರು.
ಆಳಂದ: “ಆರೋಗ್ಯ, ಜ್ಞಾನ ಮತ್ತು ಚಾರಿತ್ರ್ಯವು ಪ್ರತಿಯೊಬ್ಬ ಮನುಷ್ಯನ ಪ್ರಮುಖ ಆಸ್ತಿಯಾಗಿವೆ” ಎಂದು ಸಿಯುಕೆ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಹೇಳಿದರು.
ತಾಲೂಕಿನ ಸುಂಟನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಆಯೋಜಿಸಿದ್ದ ಸಮುದಾಯ ಯೋಗ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.
ಯೋಗವು ಆರೋಗ್ಯ ಮತ್ತು ಸದೃಢತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಶಿಕ್ಷಕರು ನಿಮಗೆ ಯೋಗಾಸನಗಳನ್ನು ಕಲಿಸುತ್ತಾರೆ. ಆರೋಗ್ಯಕರವಾಗಿರಲು ನೀವು ನಿಯಮಿತವಾಗಿ ಅವುಗಳನ್ನು ಅಭ್ಯಾಸ ಮಾಡಿ. ಇಂದು ನಾವು ಬಿಪಿ, ಶುಗರ್, ಬೆನ್ನು ನೋವು, ಕುತ್ತಿಗೆ ನೋವು, ಹೊಟ್ಟೆನೋವು ಇತ್ಯಾದಿಗಳಿಂದ ಬಳಲುತ್ತಿದ್ದೇವೆ. ಇವುಗಳನ್ನು ಯೋಗಾಭ್ಯಾಸದಿಂದ ಪರಿಹರಿಸಬಹುದು. ಯೋಗವು ಎಲ್ಲಾ ರೀತಿಯ ರೋಗಗಳಿಗೆ ಔಷಧವಾಗಿದೆ. ಆರೋಗ್ಯವು ಉತ್ತಮವಾಗಿದ್ದರೆ ನೀವು ನಿಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಬಹುದು ಹಾಗು ತರಗತಿಗಳನ್ನು ತಪ್ಪಿಸಿಕೊಳ್ಳದೆ ಶಾಲೆಗೆ ಹಾಜರಾಗಬಹುದು. ಇದು ಏಕಾಗ್ರತೆ ಮತ್ತು ಅಧ್ಯಯನಕ್ಕೆ ಸಹ ಸಹಾಯ ಮಾಡುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಯುಕೆಯ, ಶಿಕ್ಷಣ ಮತ್ತು ತರಬೇತಿ ನಿಕಾಯದ ಡೀನ್ ಪೆÇ್ರ.ಜಿ.ಆರ್.ಅಂಗಡಿ ಮಾತನಾಡಿದರು.
ಕಾರ್ಯಕ್ರಮವನ್ನು ಯೋಗ ತರಬೇತಿದಾರರಾದ ಕು.ಜ್ಯೋತ್ಸ್ನಾ ಅಂಬೇವಾಡಕರ ಮತ್ತು ಶ್ರೀ.ಸಂತೋಷ ಬಶೆಟ್ಟಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ಮಿತಾ ಜೈನ್ ಸೇರಿದಂತೆ 80 ವಿದ್ಯಾರ್ಥಿಗಳು ಮತ್ತು 8 ಜನ ಅಧ್ಯಾಪಕರು ಭಾಗವಹಿಸಿದರು.
ಸಿಯುಕೆ ಅಧ್ಯಾಪಕರಾದ ಡಾ.ದೇವಿಕಾ, ಡಾ.ತಿಯಾಗು ಸೂರ್ಯ, ಡಾ.ನರಗಿಂಟಿ ಎನ್.ಅಮರೇಶ್ವರನ್ ಭಾಗವಹಿಸಿದ್ದರು. ಇದು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ಆಸನಗಳು (ಯೋಗದ ಭಂಗಿಗಳು), ಸೂರ್ಯ ನಮಸ್ಕಾರ ಮತ್ತು ಚಂದ್ರ ನಮಸ್ಕಾರ ನಂತಹ ವಿವಿಧ ಯೋಗಗಳ ಅಭ್ಯಾಸವನ್ನು ಮಾಡಲಾಯಿತು. ಕಾರ್ಯಕ್ರಮವು ಕ್ರೀಡಾ ಯೋಗದೊಂದಿಗೆ (ಆಟಗಳ ಮೂಲಕ ಯೋಗ) ಮುಕ್ತಾಯಗೊಂಡಿತು. ತರುಣ್ ಡಾಗಾ ಕಾರ್ಯಕ್ರಮ ನಿರೂಪಿಸಿದರೆ, ಉಜ್ವಲ್ ಕುಮಾರ್ ವಂದಿಸಿದರು.