ಕಲಬುರಗಿ: ಪಬ್ಬಾರ ಸಿನಿಮಾದ ಪ್ರಚಾರ ನಿಮಿತ್ಯ ನಟ ಡಾ.ರಾಜಕುಮಾರ ಅವರ ಮೊಮ್ಮಗ,ಪಬ್ಬಾರ ಚಿತ್ರದ ನಟ ದೀರನ್ ರಾಮಕುಮಾರ ನಾಳೆ ನಗರಕ್ಕೆ ಆಗಮಿಸುತ್ತಿದ್ದು, ಪಬ್ಬಾರ ಚಿತ್ರದ ಪ್ರಚಾರವನ್ನು ನಗರದ ಕುಸನೂರ ರಸ್ತೆಯಲ್ಲಿರುವ ಸರಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪಬ್ಬಾರ ಚಿತ್ರದ ಪ್ರಚಾರ ಯಶಸ್ವಿ ಯಶಸ್ವಿಯಾಗಲು ಡಾ.ರಾಜಕುಮಾರ,ಡಾ. ಶಿವರಾಜಕುಮಾರ,ಹಾಗೂ ದಿವಗಂತ ಪುನೀತರಾಜಕುಮಾರ ಅಭಿಮಾನಿಗಳು, ಹಾಗೂ ಕನ್ನಡ ಚಿತ್ರರಂಗದ ಅಭಿಮಾನಿಗಳು, ವಿದ್ಯಾರ್ಥಿಗಳು,ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಡಾ.ರಾಜಕುಮಾರ ಹಾಗೂ ಡಾ.ಶಿವರಾಜಕುಮಾರ ಅಭಿಮಾನಿಗಳ ಮುಖಂಡ ಆನಂದ ತೆಗನೂರ ಅವರು ಮನವಿ ಮಾಡಿಕೊಂಡರು.