Shubhashaya News

ಜಾರಕಿಹೊಳಿ ಸತ್ಯ ಒಪ್ಪಿಕೊಂಡಿರುವ ಹಿಂದಿರುವ ಕಥೆಯೇನು?

ಇದುವರೆಗೆ ರಾಸಲೀಲೆ ಸಿಡಿಯಲ್ಲಿ ಇರೋದು ನಾನವನಲ್ಲ.. ನಾನವನಲ್ಲ ಎಂಬುದಾಗಿ ಹೇಳುತ್ತಿದ್ದಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಎಸ್‌ಐಟಿ ತನಿಖೆಗೂ ಹಾಜರಾಗದೇ ಇದ್ದರು. ಆದ್ರೇ.. ದಿಢೀರ್ ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ, ಸಿಡಿಯಲ್ಲಿ ಯುವತಿಯ ಜೊತೆಗಿರುವ ವ್ಯಕ್ತಿ ನಾನೇ, ನಮ್ಮದು ಒಪ್ಪಿತ ಸಂಬಂಧವಾಗಿ ಎಂಬುದಾಗಿ ಹೇಳುವ ಮೂಲಕ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೇ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೀಗೆ ಹೇಳೋದರ ಹಿಂದಿನ ಕಾರಣವೇನು ಗೊತ್ತಾ.? ಆ ಬಗ್ಗೆ ಮುಂದೆ ಓದಿ.

ಲೈಂಗಿಕ ಕ್ರಿಯೆ ದೃಶ್ಯಾವಳಿಯ ಸಿಡಿ ಹೊರ ಬೀಳುತ್ತಿದ್ದಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿಡಿಯಲ್ಲಿ ಇರೋದು ನಾನಲ್ಲ. ಇದೊಂದು ಫೇಕ್ ಸಿಡಿಯಾಗಿದೆ. ಮ್ಯಾಫಿಂಗ್ ಮಾಡಲಾಗಿದೆ. ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿ ಎಂದೆಲ್ಲಾ ಹೇಳಿಕೆ ನೀಡುತ್ತಿದ್ದರು. ಜೊತೆಗೆ ಯಾವುದೇ ಕಾರಣಕ್ಕೂ ಆ ಸಿಡಿಯಲ್ಲಿರುವ ದೃಶ್ಯಾವಳಿಗಳು ನನ್ನದಲ್ಲ. ತಂತ್ರಜ್ಞಾನ ಬಳಸಿ, ನಕಲಿ ಸಿಡಿ ಸೃಷ್ಠಿಸಲಾಗಿದೆ ಎಂಬುದಾಗಿ ಆರೋಪಿಸಿದ್ದರು.

ಆದ್ರೇ.. ಸಿಡಿಯಲ್ಲಿನ ಸಂತ್ರಸ್ತ ಯುವತಿ ಮಾತ್ರ, ರಮೇಶ್ ಜಾರಕಿಹೊಳಿ ತಮಗೆ ಕೆಲಸ ಕೊಡಿಸೋದಾಗಿ ಹೇಳಿ, ವಂಚಿಸಿ, ಅತ್ಯಾಚಾರ ಎಸಗಿದ್ದಾರೆ. ನನಗೆ ನ್ಯಾಯ ಕೊಡಿಸುವಂತೆ ಎಸ್ ಐಟಿ ಅಧಿಕಾರಿಗಳ ಮುಂದೆ ತಿಳಿಸಿದ್ದರು. ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದ್ರೇ.. ಈ ಆರೋಪವನ್ನು ರಮೇಶ್ ಜಾರಕಿಹೊಳಿ ಮಾತ್ರ ಬಿಲ್ ಖುಲ್ ನಿರಾಕರಿಸಿದ್ರು

ಈ ಎಲ್ಲಾ ಘಟನೆಯ ನಡುವೆ ಕೊರೋನಾ 2ನೇ ಅಲೆಯ ಆರ್ಭಟ ಜೋರಾಗಿದ್ದರಿಂದಾಗಿ, ಸಿಡಿ ಪ್ರಕರಣದ ತನಿಖೆಯನ್ನು ತಾತ್ಕಾಲಿಕವಾಗಿ ಎಸ್ ಐಟಿ ನಿಲ್ಲಿಸಿತ್ತು. ಜೊತೆಗೆ ಸಿಡಿ ಯುವತಿ ಪ್ರಕರಣವನ್ನು ಹಿಂದಕ್ಕೆ ಪಡೆಯುತ್ತಾರೆ ಎಂದು ಸಹ ಹೇಳಲಾಗುತ್ತಿತ್ತು. ಆದ್ರೇ ಇದನ್ನು ಸಿಡಿ ಸಂತ್ರಸ್ತೆ ಪರ ವಕೀಲರು ನಿರಾಕರಿಸಿದ್ದರು.

ಈಗ ದಿಢೀರ್ ಬಿಗ್ ಟ್ವಿಸ್ಟ್ ಸಿಡಿ ಪ್ರಕರಣಕ್ಕೆ ಸಿಕ್ಕಿದೆ. ಎಸ್ ಐಟಿ ಮುಂದೆ ಹಾಜರಾಗಿರುವಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿಯಲ್ಲಿ ಇರೋದು ನಾನೇ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹಾಗಾದ್ರೇ.. ಹೀಗೆ ಒಪ್ಪಿಕೊಳ್ಳೋದಕ್ಕೆ ಕಾರಣ ಏನ್ ಗೊತ್ತಾ.?

ಹೌದು.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ದಿಢೀರ್ ಎಸ್ ಐಟಿ ಅಧಿಕಾರಿಗಳ ಮುಂದೆ ರಮೇಶ್ ಜಾರಕಿಹೊಳಿ, ಸಿಡಿಯಲ್ಲಿರೋದು ನಾನೇ ಎಂದು ಹೇಳಿದ್ದರ ಹಿಂದೆ, ಕಾರಣವಿದೆ. ಅವರ ಕಾನೂನು ತಜ್ಞರು ಸಿಡಿ ಪ್ರಕರಣದ ತನಿಖೆ ಸುಧೀರ್ಘವಾಗಿ ನಡೆಯಲಿದೆ. ಒಂದು ವೇಳೆ ಪ್ರಕರಣ ಸಾಭೀತಾದ್ರೇ.. ನಿಮ್ಮ ರಾಜಕೀಯ ಭವಿಷ್ಯಕ್ಕೆ ಮುಳುವಾಗಲಿದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಪ್ರಕರಣ ಸುಧೀರ್ಘತೆಯನ್ನು ಪಡೆದು, ವಿಚಾರಣೆ ಮುಂದೊಂದು ದಿನ ತಮ್ಮ ರಾಜಕೀಯ ಭವಿಷ್ಯವನ್ನೇ ಹಾಳು ಮಾಡೋ ಬದಲಾಗಿ, ಅದಕ್ಕೂ ಮೊದಲೇ, ತಾನೇ ಸಿಡಿಯಲ್ಲಿ ಇರೋ ವ್ಯಕ್ತಿ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿಡಿ ಪ್ರಕರಣವನ್ನು ಸಂಧಾನದ ಮೂಲಕ ಬಗೆ ಹರಿಸಿಕೊಳ್ಳೋದಕ್ಕೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದೆ.

ಇದರ ಮಧ್ಯೆ ಸಿಡಿ ಪ್ರಕಣದಲ್ಲಿ ಯುವತಿಯ ಹೇಳಿಕೆಯನ್ನು ಈಗಾಗಲೇ ಎಸ್‌ಐಟಿ ಪೊಲೀಸರು ದಾಖಲಿಸಿದ್ದಾರೆ. ವೀಡಿಯೋ ಚಿತ್ರೀಕರಣ ಕೂಡ ಮಾಡಿಕೊಂಡಿದ್ದಾರೆ. ಹೀಗಿದ್ದೂ ಯುವತಿ ಅಷ್ಟು ಸುಲಭವಾಗಿ ಇದು ಫೇಕ್ ಸಿಡಿ ಎಂದು ಹೇಳಿ ಬಿಡೋ ಸಾಧ್ಯತೆ ಕೂಡ ಇಲ್ಲ. ಜೊತೆಗೆ ರಾಜಕೀಯ ನಾಯಕರು ಸಿಡಿ ಪ್ರಕರಣದ ತನಿಖೆಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಈ ಎಲ್ಲಾ ಕಾರಣದಿಂದಾಗಿ ಒಂದು ವೇಳೆ ಸಿಡಿ ಪ್ರಕರಣದ ತೀರ್ಪು, ವಿಚಾರ ರಮೇಶ್ ಜಾರಕಿಹೊಳಿಗೆ ವಿರುದ್ಧವಾಗಿ ಬಂದ್ರೇ.. ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಈಗ ದಿಢೀರ್ ರಮೇಶ್ ಜಾರಕಿಹೊಳಿ, ಪ್ರಕರಣ ಆದಷ್ಟು ಬೇಗ ಕೊನೆಯಾಗಲಿ ಎನ್ನುವ ನಿಟ್ಟಿನಲ್ಲಿ ಸಿಡಿಯಲ್ಲಿ ಇರೋದು ನಾನೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೇ ಮುಂದಿನ ದಿನಗಳಲ್ಲಿ ಸಿಡಿ ಪ್ರಕರಣ ಮತ್ತೆ ಯಾವ ದಿಕ್ಕಿನಲ್ಲಿ ಸಾಗುತ್ತದೋ ಕಾದು ನೋಡಬೇಕಿದೆ.

Leave A Reply

Your email address will not be published.