ಕಲಬುರಗಿಯ ಕಾಂತಾ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದಿಂದ ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲಾಯಿತು.ಧರ್ಮಣ್ಣ ಧನ್ನಿ, ಮಹಾಂತೇಶ ಪಾಟೀಲ, ಸುರೇಖಾ ಬಿರಾದಾರ ಇದ್ದರು.
ಕಲಬುರಗಿ: ಕರೋನಾ ಮಹಾಮಾರಿಯಿಂದ ಜನ ಸಾಮಾನ್ಯರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕ ಕುಟುಂಬಗಳ ಬದುಕು ಕಟ್ಟಿ ಹಾಕಿದೆ. ತಮ್ಮ ಬರಹಗಳ ಮೂಲಕ ಮನ ಮಿಡಿದ ಕಲಬುರಗಿ ಜಿಲ್ಲೆಯ ಬರಹಗಾರರು ಆರ್ಥಿಕ ಸಹಾಯ ಕೃಡೀಕರಿಸಿ ಮಾನವೀಯ ನೆಲೆಯಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಬರಹಗಾರರ ಬಳಗ ಹೂವಿನ ಹಡಗಲಿಯ ಅಧ್ಯಕ್ಷ ಮಧು ನಾಯ್ಕ ಎಲ್ ಅವರ ಸಲಹೆಯಂತೆ ಜಿಲ್ಲಾ ಘಟಕದ ಸದಸ್ಯರಿಂದ ಇಂದು ನಗರದ ಕಾಂತಾ ಕಾಲೋನಿಯ ಬಡ ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯ, ಸ್ಯಾನಿಟೈಜರ್, ತೊಗರಿ ಬೆಳೆ, ಮಾಸ್ಕ್‍ಗಳನ್ನು ವಿತರಿಸಲಾಯಿತು.
ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ಎನ್ ಪಾಟೀಲ ಯಾತನೂರ ಹಾಗೂ ಸಂಚಾಲಕ ಧರ್ಮಣ್ಣ ಎಚ್ ಧನ್ನಿ ಅವರ ನೇತೃತ್ವದಲ್ಲಿ ಸುಮಾರು 20 ಬಡ ಕುಟುಂಬಗಳಿಗೆ ಆಹಾರ ಧಾನ್ಯ ನೀಡಲಾಗಿದೆ. ಈ ಸಂದರ್ಭದಸಲ್ಲಿ ಮಾತನಾಡಿದ ಅವರು, ಕರೋನಾ ಸಂಕಷ್ಟದ ವೇಳೆಯಲ್ಲಿ ಬಡವರ ಬದುಕು ದುಸ್ತರಗೊಂಡಿದೆ. ಬಡ ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಜಿಲ್ಲೆಯ ಬರಹಗಾರರು, ಕವಿಗಳು ನೆರವಾಗಿದ್ದಾರೆ. ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸೇವಾ ಕಾರ್ಯಗಳನ್ನು ಬಳಗದಿಂದ ಆಯೋಜಿಸಲಾಗುತ್ತದೆ. ಕೊರೊನಾ ಸೋಂಕಿನಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕು, ಸುರಕ್ಷಿತವಾಗಿರಬೇಕು ಎಂದು ಜಾಗೃತಿ ಮೂಡಿಸಿದರು.
ಕವಯತ್ರಿಯರಾದ ಸುರೇಖಾ ಬಿರಾದಾರ, ಗಂಗಮ್ಮ ನಾಲವಾರ, ಗೀತಾ ಭರಣಿ, ಮಹೇಶ ಜೇವರ್ಗಿ, ನಿವೃತ್ತ ಮುಖ್ಯೋಪಾಧ್ಯಾಯ ಗುರುಶಾಂತಪ್ಪ ಜೋಗನ್, ಶಿಕ್ಷಕ ಮಹಾದೇವ ಕೋಥಲಿ, ವಿಠ್ಠಲ ಅರ್ಜುಣಗಿ ಸೇರಿ ಬಳಗದ ಸದಸ್ಯರು, ಮಹಿಳೆಯರು ಇದ್ದರು.