ಹರ ಘರ ತಿರಂಗಾ ಯಾತ್ರೆಗೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಚಾಲನೆ
ಆಳAದದಲ್ಲಿ ಬಿಜೆಪಿ ಯುವ ಮೋರ್ಚಾ ತಿರಂಗಾ ಬೈಕ್ ರ್ಯಾಲಿ
ಆಳಂದ: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ಹರ ಘರ ತಿರಂಗಾ ಯಾತ್ರೆಯ ಬೈಕ್ ರ್ಯಾಲಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಜಿಲ್ಲಾ ಸಂಚಾಲಕ ಆನಂದ ಪಾಟೀಲ ಕೊರಳ್ಳಿ, ಸಂತೋಷ ಹಾದಿಮನಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟçಧ್ವಜ ಹಿಡಿದು ಪಾಲ್ಗೊಂಡರು.
ಆಳಂದ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶಭಕ್ತಿ ಹಾಗೂ ರಾಷ್ಟçಾಭಿಮಾನವನ್ನು ಸಾರುವ ಉದ್ದೇಶದಿಂದ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಗುರುವಾರ ಭವ್ಯ ಹರ ಘರ ತಿರಂಗಾ ಯಾತ್ರೆ ಹಾಗೂ ಬೈಕ್ ರ್ಯಾಲಿ ನಡೆಯಿತು.
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ನಾಗರಾಜ್ ದೇನಕ್ ನೇತೃತ್ವದಲ್ಲಿ ನಡೆದ ರ್ಯಾಲಿಗೆ ಮಾಜಿ ಶಾಸಕ ಸುಭಾಷ ಗುತ್ತೇದಾರ ರಾಷ್ಟçಧ್ವಜ ತೋರಿ ಚಾಲನೆ ನೀಡಿ ಶುಭ ಕೋರಿದರು. ಪಟ್ಟಣದ ಸಿದ್ಧಾರ್ಥ ಚೌಕ್ನಿಂದ ಆರಂಭಗೊAಡ ರ್ಯಾಲಿಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದ ಹಳೆಯ ಚೆಕ್ಪೋಸ್ಟ್ನಲ್ಲಿರುವ ಸಂಗೋಳಿ ರಾಯಣ್ಣನವರ ಪ್ರತಿಮೆವರೆಗೆ ಸಾಗಿತು.
ಯುವ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೈಕ್ಗಳಲ್ಲಿ ರಾಷ್ಟçಧ್ವಜ ಹಿಡಿದು ದೇಶಭಕ್ತಿಯ ಘೋಷಣೆಗಳೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಂಡರು. ಪಟ್ಟಣದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಾಗಿದ ತಿರಂಗಾ ಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು.
ಹಳೆಯ ಚೆಕ್ಪೋಸ್ಟ್ನಲ್ಲಿರುವ ಸಂಗೋಳಿ ರಾಯಣ್ಣನವರ ಪ್ರತಿಮೆ ಬಳಿ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ರಾಷ್ಟçಧ್ವಜವು ದೇಶದ ಏಕತೆ, ಅಖಂಡತೆ, ಸ್ವಾಭಿಮಾನ ಹಾಗೂ ದೇಶಭಕ್ತಿಯ ಪ್ರತೀಕವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸುವುದರ ಜೊತೆಗೆ ಯುವಜನರಲ್ಲಿ ದೇಶಾಭಿಮಾನ ಹಾಗೂ ರಾಷ್ಟçಪ್ರೇಮದ ಮನೋಭಾವ ಬೆಳೆಸುವ ಉದ್ದೇಶದಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಯುವಕರು ದೇಶದ ಭವಿಷ್ಯದ ಶಕ್ತಿಯಾಗಿದ್ದು, ರಾಷ್ಟçದ ಏಕತೆ ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟç ನಿರ್ಮಾಣದಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಹರ ಘರ ತಿರಂಗಾ ಸಮಿತಿ ಜಿಲ್ಲಾ ಸಂಚಾಲಕ ಆನಂದ ಪಾಟೀಲ ಕೊರಳ್ಳಿ, ಸಹ ಕಾರ್ಯದರ್ಶಿ ಮಹಿಂದ್ರ ಪೂಜಾರಿ, ಜಿಲ್ಲಾ ಮುಖಂಡ ಸಿದ್ಧರೂಢ ಸಮತಾಜೀವನ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಸಂಜಯ ಮಿಸ್ಕಿನ್, ಕುಮಾರ ಬಂಡೆ, ಮಹಾಂತೇಶ ಕಲಶೆಟ್ಟಿ, ಸಿದ್ಧಗೌಡ ಶಖಾಪೂರ, ಫಯಾಜ್ ಪಟೇಲ್, ಧರಪ್ಪ ಜಕಾಪೂರ, ನಟರಾಜ ವಡಗಾಂವ ಸೇರಿದಂತೆ ಅನೇಕರು ಭಾಗವಹಿಸಿದ್ದರು.