Shubhashaya News

ನಾಳೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯರನ್ನ ಕರೆದದ್ದು ಯಾಕೆ ಗೊತ್ತಾ? : ಇಲ್ಲಿದೆ ಮಹತ್ವದ ಮಾಹಿತಿ!

 ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಅದಕ್ಕೆ ಪುಷ್ಠಿ ನೀಡುವಂತೆ ಹೈಕಮಾಂಡ್ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿದ್ದು ಇದೀಗ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 7:00 ಗಂಟೆಗೆ ದೆಹಲಿಗೆ ತೆರಳಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿಯಾಗಿ ಅವರ ಜೊತೆಗೆ ಹಲವು ವಿಷಯಗಳು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಇದಕ್ಕೂ ಮುನ್ನ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿರಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಇದೀಗ ಮಹತ್ವದ ವಿಚಾರ ಹೊರ ಬಿದ್ದಿದ್ದು, 2028 ಚುನಾವಣೆ ಗೆಲ್ಲಲು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ನಾಳೆ ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದು ಇದೀಗ ಬಲ್ಲಮೂಲಗಳಿಂದ ತಿಳಿದುಬಂದಿದೆ.

2028ರ ಚುನಾವಣೆಯ ಕುರಿತು ಚರ್ಚೆ ಮಾಡುವುದಕ್ಕೆ ಹೈಕಮಾಂಡ್ ಅವರು ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದಾರೆ ನಾಯಕತ್ವದ ಬಗ್ಗೆ ಹುಟ್ಟಿರುವ ಗೊಂದಲದ ಪ್ರಸ್ತಾಪ ಕೂಡ ಈ ವೇಳೆ ಆಗಬಹುದು. 2028ರಲ್ಲಿ ಯಾರ ನಾಯಕತ್ವ ಎಂಬ ಬಗ್ಗೆ ಚರ್ಚೆ ನಡೆದಿದ್ದು, ಸ್ಟಟರ್ಜಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕೇಳುವ ಸಾಧ್ಯತೆ ಇದೆ. 2028 ಗೆಲ್ಲಲು ನೀವು ಏನೆಲ್ಲಾ ಪ್ಲಾನ್ ಮಾಡಿದ್ದೀರಿ? ಎಂದು ಹೈಕಮಾಂಡ್ ನಾಯಕರಿಂದ ಪ್ರಶ್ನೆ ಕೇಳುವ ಸಾಧ್ಯತೆಗಳು ಇವೆ.2028 ರ ಚುನಾವಣೆ ಗೆಲ್ಲಲು ಯಾರ ನಾಯಕತ್ವ ಸೂಕ್ತ? ಸಿದ್ದರಾಮಯ್ಯ ಪಾತ್ರವೇನು? ಸಾಮೂಹಿಕ ನಾಯಕತ್ವಾನ ಅಥವಾ ಒಬ್ಬರ ನಾಯಕತ್ವನಾ? ಯಾವ ನಿರ್ಧಾರ ಪಕ್ಷಕ್ಕೆ ಉತ್ತಮ? ಎಂಬ ಬಗ್ಗೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸುವ ಸಾಧ್ಯತೆ ಇದೆ.

Leave A Reply

Your email address will not be published.