ಆಳಂದ: ಕಿಣ್ಣಿಸುಲ್ತಾನ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ಭಾವಚಿತ್ರದ ಅದ್ಧೂರಿ ಮೆರವಣಿಗೆ ಹಾಗೂ ರಥೋತ್ಸವ ನಡೆಯಿತು.
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಬಳಿಕ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಗ್ರಾಮದ ಶಾಂತಲಿAಗೇಶ್ವರ ಹಿರೇಮಠದ ಶ್ರೀ ಶಿವಶಾಂತಲಿAಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸೋಮವಾರ ಬೆಳಗಿನ ಜಾವ ಪಲ್ಲಕ್ಕಿ ಮೆರವಣಿಗೆ ಬಳಿಕ ಅಗ್ನಿ ಪ್ರವೇಶ ಮಧ್ಯಾಹ್ನ ಬಸವೇಶ್ವರ ದೇವಾಲಯದಲ್ಲಿ ನಡೆದ ವೇಳೆ ಅನೇಕ ತಾಯಂದಿರು, ಭಕ್ತಾದಿಗಳ ಪಾಲ್ಗೊಂಡು ತೋಟಿಲು ಕಾರ್ಯಕ್ರಮದ ವಿಧಿ ವಿಧಾನವ ನಡೆಸಿಕೊಟ್ಟರು.
ಬಳಿಕ ಸಂಜೆ ಕಡಗಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಮತ್ತು ಗ್ರಾಮದ ಶಿವಶಾಂತಲಿAಗ ಶಿವಾಚಾರ್ಯರ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಗ್ರಾಮ ಸೇರಿದಂತೆ ನೆರೆಹೊರೆಯ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ರಾತ್ರಿ ರಂಗ ರಂಗಿನ ಮದ್ದು ಸುಡುವಲ್ಲಿ ಬಾನೆತ್ತರಕ್ಕೆ ಹಾರಿದ ಪಟಾಗಿ ಚಿತ್ತಾರ ಮನಮೋಹಕ ನೋಟವು ನೋಡುಗರ ಗಮನ ಸೆಳೆಯಿತು. ರಾತ್ರಿ ಕಮಲಾಪೂರದ ಶ್ರೀ ಹೋಟೆಲ್ಮಹಾಲಕ್ಷಿö್ಮÃ ನಾಟ್ಯ ಸಂಘದ ಮಗ ಹೋದರು ಮಾಂಗಲ್ಯ ಬೇಕು, ಅರ್ಥಾತ್ ಹೆತ್ತವಳ ಹಾಲು ವಿಷವಾಯಿತು ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.
ಈ ಮುನ್ನದಿನ ನಂದಿಕೋಲ ಮೆರವಣಿಗೆ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಕಮೀಟಿ ಅಧ್ಯಕ್ಷ ಶಂಕರಯ್ಯಾ ಸ್ವಾಮಿ, ಶಿವಾನಂದ ದೇಸಾಯಿ, ಮಾಣಿಕ ಕಾಸರ, ಬಸವರಾಜ ಹಂಗರಗೆ, ರಮಾಕಾಂತ ಕದಗರಗೆ, ಬಸವಂತರಾಯ ಧೂಳೆ, ಶಿವಂಕರ ಮುನ್ನೊಳ್ಳಿ ಸರ್ವ ಭಕ್ತಾಧಿಕಾರಿಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು.
ಮಂಗಳವಾರ ಮಧ್ಯಾಹ್ನ ೪:೦೦ಗಂಟೆಗೆ ಜಂಗಿ ಫೈಲ್ವಾನರ ಕುಸ್ತಿ ಹಾಗೂ ವಿಜೇತರಿಗೆ ನಗದು ಬಹುಮಾನ ವಿತರಣೆ ನಡೆಯಿತು. ರಾತ್ರಿ ಆಡಮುಟ ಮಾವ ಎಡವಟು ಅಳಿಯ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಜಾತ್ರೆಯ ಮದ್ದು ಸುಡಲು ಭಕ್ತ ಸೇವೆಯನ್ನು ಸಿದ್ಧರಾಮ ಅಮೃತ ದೇಸಾಯಿ ಕೈಗೊಂಡರೆ, ಎರಡು ದಿನಗಳ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಗ್ರಾಮದ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಕೈಗೊಂಡಿದ್ದರು. ಕುಸ್ತಿ ಪಟುಗಳಿಗೆ ಬಹುಮಾನ ಗ್ರಾಮದ ರೈತ ಬಳಗದಿಂದ ಹಾಗೂ ರಥಕ್ಕೆ ಪುಷ್ಪಾಲಂಕಾರವನ್ನು ಶ್ರೀಶೈಲ ಎಸ್. ದಮ್ಮುರೆ, ಬಸವ ಮೂರ್ತಿ ಕಾಣಿಕೆಯನ್ನು ಗುರುಲಿಂಗಪ್ಪಾ ಕೆ. ಮುಲಗೆ ಕೈಗೊಂಡರು ಅಲ್ಲದೆ, ಜಾತ್ರಾ ವಾಲ್ಪೋಸ್ಟ್ರ ಸೇವೆಯನ್ನು ಮಲ್ಲಿಕಾರ್ಜುನ ಕೊರಳ್ಳಿ, ಹರಕೆಯನ್ನು ಶಾಂತಪ್ಪ ಧೂಳೆ ಸೇರಿದಂತೆ ಇಡೀ ಗ್ರಾಮಸ್ಥರು ಹಾಗೂ ದೇವಸ್ಥಾನ ಕಮೀಟಿ ಸರ್ವರು ಕೂಡಿ ಜಾತ್ರಾ ಉತ್ಸವ ಯಶಸ್ವಿಗೆ ಶ್ರಮಿಸಿ ಭಕ್ತಿಯನ್ನು ಸಮರ್ಪಿಸಿದರು.
Comments are closed.