ಆಳಂದ: ಸಿಯುಕೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿದರು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಪ್ರೊ. ಭರತಕುಮಾರ್, ಶ್ರವಣ, ಪಿ.ಆರ್.ಓ ಹಲವರು ಉಪಸ್ಥಿತರಿದ್ದರು.
ಆಳಂದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ೧೦ನೇ ಘಟಿಕೋತ್ಸವ ಇದೇ ಏಪ್ರಿಲ್ ೨೨ರಂದು ವಿಶ್ವವಿದ್ಯಾಲಯದ ನಲ್ಕಿ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿAದ ನಡೆಯಲಿದ್ದು, ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.
ಕಡಗಂಚಿಯಲ್ಲಿರುವ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೨.೩೦ಕ್ಕೆ ವಿಶ್ವವಿದ್ಯಾಲಯದ ಬಹುಪಯೋಗಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹ ಉಪಸ್ಥಿತರಿರಲಿದ್ದಾರೆ ಎಂದರು.
ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪಾಲಕರು ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಘಟಿಕೋತ್ಸವದ ಯಶಸ್ವಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯವು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೊAದು ಆಗಿದ್ದು, ಪ್ರಸ್ತುತ ೩೪ ವಿಭಾಗಗಳ ಮೂಲಕ ೩೪ ಪದವಿ ಮತ್ತು ೧೫ ಸ್ನಾತಕೋತ್ತರ ಕೋರ್ಸ್ಗಳನ್ನು ಬೋಧಿಸಲಾಗುತ್ತಿದೆ. ೨೦೨೬-೨೭ರಿಂದ ಐದು ಹೊಸ ಪದವಿ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಸುಮಾರು ೩,೨೦೦ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ೨೧೩ ಬೋಧಕ ಹಾಗೂ ೧೧೦ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಶೋಧನಾ ಚಟುವಟಿಕೆಗಳೂ ಗಣನೀಯವಾಗಿ ವೃದ್ಧಿಯಾಗಿದ್ದು, ಹಿಂದೆ ೧೦೦ರಷ್ಟಿದ್ದ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ ಇದೀಗ ೪೫೦ಕ್ಕೆ ಏರಿಕೆಯಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸದಾಗಿ ಎರಡು ವಸತಿ ನಿಲಯಗಳನ್ನು ನಿರ್ಮಿಸಲಾಗಿದ್ದು, ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ವಿಶೇಷವೆಂದು ಕುಲಪತಿ ಹೇಳಿದರು.
ಪಿ.ಜಿ ಪರೀಕ್ಷೆಗಳು ಸೋಮವಾರದಿಂದ ಪ್ರಾರಂಭವಾಗಿ ಮೇ ೮ರಂದು ಮುಕ್ತಾಯವಾಗಲಿದ್ದು, ಮೇ ಅಂತ್ಯದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಕ್ಯಾಂಪಸ್‌ನ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪರ್ಯಾಯ ವ್ಯವಸ್ಥೆಗಳತ್ತ ಗಮನ ಹರಿಸಲಾಗುತ್ತಿದೆ. ಹಸಿರೀಕರಣ ಹಾಗೂ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಸಿ.ಎಸ್.ಆರ್ ನಿಧಿಯಲ್ಲಿ ೧ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮುಂದಿನ ೪-೫ ವರ್ಷಗಳಲ್ಲಿ ಕ್ಯಾಂಪಸ್ ಸಂಪೂರ್ಣ ಹಸಿರಿನಿಂದ ಕಂಗೊಳಿಸುವುದಾಗಿ ತಿಳಿಸಿದರು.
೨೪ ಮಂದಿಗೆ ಪಿ.ಎಚ್.ಡಿ: ೨೨ ಮಂದಿಗೆ ಚಿನ್ನದ ಪದಕ ಈ ಘಟಿಕೋತ್ಸವದಲ್ಲಿ ಒಟ್ಟು ೭೬೯ ಅಭ್ಯರ್ಥಿಗಳು ಪದವಿ ಸ್ವೀಕರಿಸಲಿದ್ದು, ಇದರಲ್ಲಿ ೧೯೭ ಮಂದಿ ಪದವಿ, ೫೪೭ ಮಂದಿ ಸ್ನಾತಕೋತ್ತರ, ೨೪ ಮಂದಿ ಪಿ.ಎಚ್.ಡಿ ಹಾಗೂ ಒಬ್ಬರು ಎಂ.ಫಿಲ್ ಪದವಿಗೆ ಅರ್ಹರಾಗಿದ್ದಾರೆ. ಒಟ್ಟು ೪೬೦ ಅಭ್ಯರ್ಥಿಗಳು ನೇರವಾಗಿ ಭಾಗವಹಿಸಿ ಪದವಿ ಸ್ವೀಕರಿಸಲಿದ್ದಾರೆ. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದ ೨೨ ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ.
ಮಧ್ಯಪ್ರದೇಶ ಮೂಲದ ಬಿ.ಟೆಕ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿAಗ್ ವಿದ್ಯಾರ್ಥಿನಿ ದಿವ್ಯಾಂಶು ಸಕ್ಸೇನಾ ಅವರು ಪ್ರೊ. ಎ.ಎಂ. ಪಠಾಣ್ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಅರ್.ಆರ್. ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಭರತಕುಮಾರ್, ಸಹಾಯಕ ರಿಜಿಸ್ಟ್ರಾರ್ ಶ್ರವಣ, ಪಿ.ಆರ್.ಓ ಡಾ. ಗಣಪತಿ ಸಿನ್ನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments are closed.