ಆಳಂದ: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿ ಕರೆದ ಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ ಮಾತನಾಡಿದರು. ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ, ದಯಾನಂದ, ಮುತ್ತಣ್ಣ, ಲಕ್ಷಿö್ಮÃಣ ಝಳಕಿ ಇತರರು ಇದ್ದರು.
ಆಳಂದ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮೇ ೬ ಮತ್ತು ೭ರಂದು ಎರಡು ದಿನಗಳ ಕಾಲ ವಿಶೇಷ ಹಾಗೂ ಅರ್ಥಪೂರ್ಣ ಉತ್ಸವವನ್ನು ಆಯೋಜಿಸಲಾಗಿದ್ದು, ಭವ್ಯ ಕಾರ್ಯಕ್ರಮಗಳಿಗೆ ಸಿದ್ಧತೆ ಭರದಿಂದ ಸಾಗಿದೆ ಜಯಂತಿ ಪ್ರಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ ಅವರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಉತ್ಸವ ಸಮಿತಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಈ ಪ್ರಥಮ ಬಾರಿಗೆ ತಾಲೂಕು ಮಟ್ಟದ ಸಮಿತಿಯ ಆಶ್ರಯದಲ್ಲಿ ಸಂಯೋಜಿತವಾಗಿ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಜನಸಾಮಾನ್ಯರ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.
ಮೇ ೬ರಂದು ಸಂಜೆ ೫:೦೦ ಗಂಟೆಗೆ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮೈಸೂರು ಉರಿಲಿಂಗ ಪೇದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಖ್ಯಾತ ವಾಗ್ಮೀ ಸುಸ್ಮಾ ಅಂದಾರೆ, ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘ್ಮೋರೆ, ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಜೆಡಿ(ಎಸ್) ಜಿಲ್ಲಾಧ್ಯಕ್ಷೆ ಮಹೇಶ್ವರಿ ಎಸ್. ವಾಲಿ, ಕೊಳಗಾಲದ ಮಾಜಿ ಶಾಸಕ ಎನ್. ಮಹೇಶ ಸೇರಿದಂತೆ ಅನೇಕ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಸಮಾರಂಭದ ಬಳಿಕ ಕಲಬುರಗಿಯ ಡಾ. ಅಂಬೇಡ್ಕರ್ ಕಲಾ ತಂಡದಿAದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಪ್ರತಿಬಿಂಬಿಸುವ ನಾಟಕ ಪ್ರದರ್ಶನವೂ ನಡೆಯಲಿದೆ. ಈ ನಾಟಕವು ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಮಾಜ ಪರಿವರ್ತನೆಗೆ ಅವರ ಕೊಡುಗೆಯನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.
ಮೇ ೭ರಂದು ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದಿನವಿಡೀ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಕಲಾತ್ಮಕ ಪ್ರದರ್ಶನಗಳು ಮೆರವಣಿಗೆಯ ಆಕರ್ಷಣೆಯಾಗಲಿವೆ.
ಸ್ಥಳೀಯ ಭೀಮನಗರದ ಆಶ್ರಯದಲ್ಲಿ ರಚಿತವಾದ ತಾಲೂಕು ಮಟ್ಟದ ಜಯಂತಿ ಉತ್ಸವ ಸಮಿತಿಯ ಮೂಲಕ ಈ ಬಾರಿ ವಿಶಿಷ್ಟ ರೀತಿಯಲ್ಲಿ ಆಚರಣೆ ನಡೆಯುತ್ತಿದ್ದು, ತಾಲೂಕಿನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಿವುಪುತ್ರ ನಡಗೇರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ, ಉಪಾಧ್ಯಕ್ಷ ಗಂಗಾರಾಮ ಮುದಗಲೆ, ಮುಖಂಡ ದಯಾನಂದ ಸಾಲೇಗಾಂವ, ಕಿಟ್ಟಿ ಸಾಲೇಗಾಂವ, ಮುತ್ತಣ್ಣಾ ಜಂಗಲೆ, ಲಕ್ಷö್ಮಣ ಝಳಕಿಕರ್, ಅಜೆಯ ಸಿ.ಎಂ. ನಾಗರಾಜ ದೇವನೂರ, ಸುಧಾಕರ್ ಮೊದಲೆ, ಕೆಂಚಣ್ಣಾ ಝಳಕಿಕರ್ ಅನೇಕರು ಭಾಗವಹಿಸಿದ್ದರು.
Comments are closed.