Shubhashaya News

ಸ್ಪರ್ಧಾತ್ಮಕ ಯುಗದಲ್ಲಿ ಎಂಜಿನಿಯರ್‍ಗಳಿಗೆ ಮೃದು ಕೌಶಲ್ಯಗಳೇ ಯಶಸ್ಸಿನ ಮಂತ್ರ: ಡಾ. ಶುಷ್ಮಾ

ಆಳಂದ: ಸಿಯುಕೆಯಲ್ಲಿ ಸಾಫ್ಟ್ ಸ್ಕಿಲ್ಸ್” ಒಂದು ದಿನದ ಮೃದು ಕೌಶಲ್ಯಗಳ ಅಭಿವೃದ್ದಿ ಕಾರ್ಯಾಗಾರದಲ್ಲಿ ಡಾ. ಶುಷ್ಮಾ ಮಾತನಾಡಿದರು. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಇದ್ದರು.

ಆಳಂದ: ಲಿಂಕ್ಡ್‍ಇನ್‍ನ ಇತ್ತೀಚಿನ ಸಂಶೋಧನೆಯ ಪ್ರಕಾರ ಶೇ. 85 ರಷ್ಟು ಉದ್ಯೋಗ ಯಶಸ್ಸು ಮೃದು ಕೌಶಲ್ಯಗಳಿಂದಲೇ ಸಾಧ್ಯವಾಗುತ್ತದೆ. ಐಐಟಿಗಳ ಸಂಶೋಧನೆಯು ಹೆಚ್ಚಿನ ಭಾವನಾತ್ಮಕ ಬುದ್ಧಿಮತ್ತೆ ಹೊಂದಿರುವ ಎಂಜಿನಿಯರ್‍ಗಳ ತಂಡಗಳು ಇತರರಿಗಿಂತ ಶೇ. 20 ರಷ್ಟು ವೇಗವಾಗಿ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತವೆ ಎಂದು ಸಿಯುಕೆಯ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್‍ನ ನಿರ್ದೇಶಕಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಶುμÁ್ಮ ಎಚ್ ಹೇಳಿದರು.
ತಾಲೂಕಿನ ಕಡಗಂಚಿ ಸಮೀಪದ ಸಿಯುಕೆಯ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್ ವತಿಯಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ರೀಇಂಜಿನಿಯರಿಂಗ್ ಎಂಜಿನಿಯರ್ಸ್ ಸಾಫ್ಟ್ ಸ್ಕಿಲ್ಸ್” ಎಂಬ ಒಂದು ದಿನದ ಮೃದು ಕೌಶಲ್ಯಗಳ ಅಭಿವೃದ್ದಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಎಐ ಯುಗದಲ್ಲಿ ತಂತ್ರಜ್ಞಾನ ಎಲ್ಲರಿಗೂ ಸಮಾನವಾಗಿ ಲಭ್ಯವಾಗುತ್ತಿರುವ ಸಂದರ್ಭದಲ್ಲಿ ಮೃದು ಕೌಶಲ್ಯಗಳೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಅಂಚನ್ನು ನೀಡುವ ಪ್ರಮುಖ ಅಂಶವಾಗಿವೆ, ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೃದು ಕೌಶಲ್ಯಗಳಲ್ಲಿ ತರಬೇತಿ ನೀಡುವುದರ ಜೊತೆಗೆ, ಉದ್ಯಮದ ಅವಶ್ಯಕತೆಗಳಿಗೆ ತಕ್ಕಂತೆ ವಿಶೇಷ ತರಬೇತಿಯನ್ನು ನೀಡಲು ಸಂಬಂಧಿತ ಉದ್ಯಮಗಳೊಂದಿಗೆ ಒಪ್ಪಂದಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ತರಬೇತಿ ಉದ್ಘಾಟಿಸಿದ ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಮೃದು ಕೌಶಲ್ಯಗಳು ಅತ್ಯಂತ ಅಗತ್ಯವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಮಾತ್ರ ಸಾಕಾಗುವುದಿಲ್ಲ. ಇಂದಿನ ಯುಗದಲ್ಲಿ ಯಶಸ್ಸು ಸಾಧಿಸಲು ತಾಂತ್ರಿಕ ಜ್ಞಾನಕ್ಕಿಂತಲೂ ಹೆಚ್ಚಿನದಾಗಿ ಆತ್ಮವಿಶ್ವಾಸ, ಸಾರ್ವಜನಿಕ ಭಾಷಣ, ಪರಿಣಾಮಕಾರಿ ಸಂವಹನ ಕೌಶಲ್ಯ, ವಿಮರ್ಶಾತ್ಮಕ ಹಾಗೂ ವಿಶ್ಲೇಷಣಾತ್ಮಕ ಚಿಂತನೆ, ತಂಡದಲ್ಲಿ ಕೆಲಸ ಮಾಡುವ ಸಾಮಥ್ರ್ಯ ಮುಂತಾದ ಮೃದು ಕೌಶಲ್ಯಗಳು ಅತ್ಯಗತ್ಯವಾಗಿವೆ ಎಂದು ಹೇಳಿದರು.
ಎಐದಂತ ತಂತ್ರಜ್ಞಾನಗಳು ವೃತ್ತಿಜೀವನದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮಗಿರುವ ಸಾಮಥ್ರ್ಯವನ್ನು ಗುರುತಿಸಿಕೊಂಡು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಐಕ್ಯೂಎಸಿ ನಿರ್ದೇಶಕ ಪೆÇ್ರ. ಅಮರೇಂದ್ರ ಮತ್ಸ ಮಾತನಾಡಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳಬೇಕಿದೆ. ಎಐ ಪುನರಾವರ್ತಿತ ಕೆಲಸಗಳನ್ನು ಮಾಡಬಲ್ಲದು, ಆದರೆ ಮಾನವ ಸಂವೇದನೆ, ಸಂಬಂಧ ಹಾಗೂ ನಾಯಕತ್ವವನ್ನು ಬೆಳೆಸಲು ಸಾಧ್ಯವಿಲ್ಲ. ಈ ರೀತಿಯ ಕಾರ್ಯಾಗಾರಗಳು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಎಂಜಿನಿಯರಿಂಗ್ ನಿಕಾಯದ ಡೀನ್ ಡಾ. ಪರಮೇಶ, ಪೆÇ್ರ. ವೀರೇಶ ಕಸಬೇಗೌಡರ, ಡಾ. ಎಂ. ಜೋಹೈರ್, ಪೆÇ್ರ. ವಿಜಯಕುಮಾರ, ಪ್ಲೇಸ್ಮೆಂಟ್ ಅಧಿಕಾರಿ ಡಾ. ಪರಮೇಶ ಸೇರಿದಂತೆ ಅಧ್ಯಾಪಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Comments are closed.

Don`t copy text!