Shubhashaya News

ಬೆಂಗಳೂರಲ್ಲಿ 7.11 ಕೋಟಿ ನಗದು ದರೋಡೆ ಕೇಸ್ : ಮಾಸ್ಟರ್ ಮೈಂಡ್ ‘ಪೊಲೀಸ್ ಕಾನ್ಸ್ಟೇಬಲ್’ ಅರೆಸ್ಟ್.!

ಬೆಂಗಳೂರಲ್ಲಿ ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ದರೋಡೆ ನಡೆದಿದ್ದು, 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ಟರ್ ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಹೌದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ದರೋಡೆಯ ಮಾಸ್ಟರ್ ಮೈಂಡ್ ಓರ್ವ ಪೊಲೀಸ್ ಕಾನ್ಸ್ಟೇಬಲ್ ಎಂಬ ಶಂಕೆ ವ್ಯಕ್ತವಾಗಿದೆ.

ದರೋಡೆ ಕೇಸ್ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಎಂಬುವವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಅಣ್ಣಪ್ಪ ನಾಯ್ಕ್ ರಾಬರಿ ಮಾಡಲು ಹುಡುಗರ ಗ್ಯಾಗ್ ರೆಡಿ ಮಾಡಿದ್ದನು. ಕಳ್ಳತನ ಹೇಗೆ ಮಾಡಬೇಕು.? ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಈತ ಹುಡುಗರಿಗೆ ಟ್ರೈನಿಂಗ್ ಕೂಡ ಕೊಟ್ಟಿದ್ದನು. ಈತನ ಪ್ಲ್ಯಾನ್ ನಂತೆ ಹುಡುಗರು 7.11 ಕೋಟಿ ದರೋಡೆ ಮಾಡಿದ್ದಾರೆ ಎನ್ನಲಾಗಿದೆ.

ವಾಟ್ಸಪ್ ಕಾಲ್ ಬಳಕೆ ಮಾಡಿರೋದು ಖಾತರಿಯಾಗುತ್ತಿದ್ದಂತೆ ಪೊಲೀಸರು ಸಿಸಿಟಿವಿಗಳ ಮೊರೆ ಹೋಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ನೋಡಿದಾಗ ದರೋಡೆಕೊರರ ಗ್ಯಾಂಗ್ ಬೆಂಗಳೂರು ದಾಟಿ ಹೋಗಿದ್ದಾರೆ ಅನ್ನೋದು ಪಕ್ಕ ಆಗಿದೆ.

Comments are closed.

Don`t copy text!