Shubhashaya News

ಡಿ. ದೇವರಾಜ ಅರಸ್ ಜಯಂತಿ ಆಚರಣೆ ನಾಳೆ 

ಆಳಂದ: ಹಿಂದುಳಿದ ವರ್ಗಗಳ ಆಶಾಕಿರಣವಾಗಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಖ್ಯಾತರಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸ್ ಅವರ ಜನ್ಮದಿನಾಚರಣೆಯನ್ನು ಆಳಂದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಪೂಜಾ ರಮೇಶ ಲೋಹಾರ ಅವರ ನಿವಾಸದಲ್ಲಿ ಆ.20 ಬೆಳಿಗ್ಗೆ 11:00 ಗಂಟೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ತಾಲೂಕಿನ ಪ್ರಗತಿಪರ ಚಿಂತಕರು, ರೈತರು, ಮಹಿಳೆಯರು, ಹಾಗೂ ಹಿಂದುಳಿದ ವರ್ಗದ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಹಿರಿಯ ಮುಖಂಡ ಭೀಮಾಶಂಕರ ಮಡಿವಾಳ, ಗೈಬುಸಾಬ್ ಭೀಂಪುರ ಜಂಟಿಯಾಗಿ ಕೋರಿದ್ದಾರೆ.

ಡಿ. ದೇವರಾಜ ಅರಸ್ ಅವರು ಭೂಸುಧಾರಣೆ, ಹಾವನೂರು ಆಯೋಗ, ಮತ್ತು “ಉಳುವವನೇ ಭೂಮಿಯ ಒಡೆಯ” ಎಂಬ ಕ್ರಾಂತಿಕಾರಿ ಕಾನೂನುಗಳ ಮೂಲಕ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಸಾಧನೆಗಳನ್ನು ಸ್ಮರಿಸಿ, ಸಾಮಾಜಿಕ ಸಮಾನತೆಗಾಗಿ ಅವರ ಕೊಡುಗೆಗಳನ್ನು ಗೌರವಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಪ್ರಗತಿಪರ ಚಿಂತಕರು, ರೈತರು, ಮಹಿಳೆಯರು, ಹಿಂದುಳಿದ ವರ್ಗದ ಮುಖಂಡರು ಪಾಳ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Comments are closed.

Don`t copy text!