Shubhashaya News

ಶಿಕ್ಷಕರು ಸಾಮಥ್ರ್ಯ ವೃದ್ಧಿಗೆ ಗುಣಮಟ್ಟದ ಸಂಶೋಧನೆಗೆ ಮುಂದಾಗಿ :

ಕುಲಪತಿ ಬಟ್ಟು ಸತ್ಯನಾರಾಯಣ ಕರೆ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಸಾಮಥ್ರ್ಯ ವೃದ್ಧಿ ತರಬೇತಿ ಸಮಾರೋಪದಲ್ಲಿ ಉಪಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿದರು. ಪೆÇ್ರ. ಜಿ. ಆರ್. ಅಂಗಡಿ, ಡಾ. ಕೆ. ತಿಯಾಗು, ಡಾ. ಪೆÇರೆಡ್ಡಿ ಬುಚಿರೆಡ್ಡಿ, ಪೆÇ್ರ. ಬಸವರಾಜ ಬೆನ್ನಿ ಇದ್ದರು.

ಆಳಂದ: ಶಿಕ್ಷಕರಲ್ಲಿ ಸಂಶೋಧನಾ ಸಾಮಥ್ರ್ಯವನ್ನು ಬೆಳೆಸುವ ಮೂಲಕ ದೇಶದ ಅಭಿವೃದ್ಧಿಗೆ ನಾಂದಿ ಹಾಡಲು ಸಾಧ್ಯ ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಶಿಕ್ಷಣ ವಿಭಾಗವು ಆಯೋಜಿಸಿದ್ದ ಯುವ ಶಿಕ್ಷಕರಿಗಾಗಿ ಎರಡು ವಾರಗಳ ಸಾಮಥ್ರ್ಯ ವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ನಿನ್ನೆ ಮಾತನಾಡಿದರು.
“ಒಂದು ರಾಷ್ಟ್ರ ಒಂದು ಚಂದಾದಾರಿಕೆ ನೀತಿಯು ವಿಶ್ವದ ಗುಣಮಟ್ಟದ ಸಂಶೋಧನಾ ಕೃತಿಗಳನ್ನು ತರಲು ಬಳಸಬಹುದಾದ ಉತ್ತಮ ಸಾಧನವಾಗಿದೆ. ಇದರ ನೆರವಿನಿಂದ ಶಿಕ್ಷಕರು ಗುಣಮಟ್ಟದ ಸಂಶೋಧನೆಗೆ ಮುಂದಾಗಬೇಕು” ರಾಷ್ಟ್ರದ ಅಭಿವೃದ್ಧಿಯು ಮುಖ್ಯವಾಗಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಅವಲಂಬಿಸಿರುತ್ತದೆ. ವಿಕಸಿತ ಭಾರತವನ್ನು ಸಾಧಿಸಲು ನಾವು ಎಲ್ಲಾ ಕ್ಷೇತ್ರಗಳಲ್ಲಿ ಗುಣಮಟ್ಟದ ಸಂಶೋಧನೆಯನ್ನು ಮಾಡಬೇಕು ಮತ್ತು ಅದರ ಪ್ರಯೋಜನಗಳು ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪಬೇಕು” ಎಂದು ಹೇಳಿದರು.
ಇದಕ್ಕೂ ಮುನ್ನ ಅವರು ಸಿಯುಕೆಯಲ್ಲಿ ಸಂಶೋಧನಾ ಸೌಲಭ್ಯಗಳ ಅಭಿವೃದ್ಧಿಗೆ ಕೈಗೊಳ್ಳಲಾದ ಕ್ರಮಗಳನ್ನು ವಿವರಿಸಿದರು. “ಪ್ರಯೋಗಾಲಯಗಳ ಪುನರುಜ್ಜೀವ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಗ್ರಂಥಾಲಯ ವೃದ್ಧಿಗಾಗಿ ಹೂಡಿಕೆ ಮಾಡಲಾಗಿದೆ. ಇಲ್ಲಿ ಕಲಿತ ಸಂಶೋಧನಾ ಮಾರ್ಗಗಳನ್ನು ತರಗತಿಗಳಿಗೆ ಮತ್ತು ವಿದ್ಯಾರ್ಥಿಗಳ ಸಂಶೋಧನೆಗೆ ಹರಡಬೇಕು. ಏಕೆಂದರೆ ರಾಷ್ಟ್ರದ ಬೆಳವಣಿಗೆಯೂ ಸಂಶೋಧನೆ ಮತ್ತು ನಾವೀನ್ಯತೆಯ ಮೇಲೆ ಅವಲಂಬಿತವಾಗಿದೆ” ಎಂದು ಕರೆ ನೀಡಿದರು.
ಕಾರ್ಯಕ್ರಮದ ನಿರ್ದೇಶಕ ಪೆÇ್ರ. ಜಿ. ಆರ್. ಅಂಗಡಿ ಮಾತನಾಡಿ, “ಶಿಕ್ಷಕರಲ್ಲಿ ಸಂಶೋಧನಾ ಸಾಮಥ್ರ್ಯ ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಗೊಂಡಿದ್ದು, ಸಂಶೋಧನಾ ವಿಧಾನಗಳು, ಪ್ರಕಟಣೆ ತಂತ್ರಗಳು, ನೈತಿಕತೆ, ಪರಿಮಾಣಾತ್ಮಕ ಮತ್ತು ಗುಣಾತ್ಮಕ ತಂತ್ರಗಳನ್ನು ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗಿದೆ” ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪೆÇ್ರ. ಬಸವರಾಜ ಬೆನ್ನಿ ಗುಣಾತ್ಮಕ ಸಂಶೋಧನಾ ತಂತ್ರಗಳ ಕುರಿತು ಉಪನ್ಯಾಸ ನೀಡಿದರು. ಡಾ. ಪೆÇರೆಡ್ಡಿ ಬುಚಿರೆಡ್ಡಿ ಎರಡು ವಾರಗಳ ತರಬೇತಿಯ ಸಾರಾಂಶ ಮಂಡಿಸಿದರು. ಸಹ-ಸಂಯೋಜಕ ಡಾ. ಕೆ. ತಿಯಾಗು ವಂದಿಸಿದರು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 36 ಯುವ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.

Comments are closed.

Don`t copy text!