ಆಳಂದ: ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಶ್ರೀಕಾಂತ ಮೇಂಗಜಿ ಅವರಿಗೆ ಮುಂಬಡ್ತಿ ವರ್ಗಾವಣೆ ಪ್ರಯುಕ್ತ ಪತ್ನಿ ಕವಿತಾ ಮೇಂಗಜಿ ಸಮೇತ ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಆಳಂದ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ ಮೇಂಗಜಿಗೆ ಬಡ್ತಿ ಪಡೆದು ಬೀದರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮವನ್ನು ಇಲಾಖೆಯ ಸಿಬ್ಬಂದಿಗಳು ಕಚೇರಿಯಲ್ಲಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಕಾಂತ ಮೇಂಗಜಿ ಅವರು ತಮ್ಮ ಸೇವಾ ಅವಧಿಯ ಸಾಧನೆಗಳನ್ನು ಸ್ಮರಿಸಿಕೊಂಡರು. “ಆಳಂದದಲ್ಲಿ ಎರಡು ಅವಧಿಗಳ ಕಾಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದ್ದು, ಈ ಅವಧಿಯಲ್ಲಿ 22 ಹೊಸ ಅಂಗನವಾಡಿ ಕಟ್ಟಡಗಳ ಮಂಜೂರಾತಿ ಮತ್ತು ನಿರ್ಮಾಣ ಮಾಡಿಸಲು ಸಾಧನೆಯಾಯಿತು. ಎಲ್ಲ ಅಂಗನವಾಡಿ ಕೇಂದ್ರಗಳ ಸಿಬ್ಬಂದಿಗಳ ಸಹಕಾರದಿಂದ ತಾಲ್ಲೂಕಿನಲ್ಲಿ ಅಪೌಷ್ಠಿಕತೆ ಕಡಿಮೆಯಾಗಲು ಸಾಧ್ಯವಾಯಿತು. ಬಾಲವಿವಾಹ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು” ಎಂದು ಅವರು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ 65 ಸಾವಿರ ಫಲಾನುಭವಿನ ಮಹಿಳೆಯರಿಗೆ ಮಾಸಿಕವಾಗಿ 2 ಸಾವಿರ ರೂಪಾಯಿಯ ಸಹಾಯಧನ, ಪೂರಕ ಪೌಷ್ಠಿಕ ಆಹಾರ ವಿತರಣೆಯಿಂದ ಗರ್ಭಿಣಿಯರ ಆರೋಗ್ಯ ಕಾಪಾಡಿದ ಕುರಿತು ವಿವರಿಸಿದರು. ಜೊತೆಗೆ ಶೂನ್ಯ ವಯಸ್ಸಿನ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುವ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಸಹಾಯ ಕಲ್ಪಿಸಲು ಕ್ರಮವನ್ನೂ ಕೈಗೊಂಡಿರುವುದಾಗಿ ಹೇಳಿದರು.
ಅಂತಿಮವಾಗಿ, ಈ ಸಾಧನೆಗಳು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸಮಾಜಮುಖಂಡರ ಸಹಕಾರದಿಂದ ಸಾಧ್ಯವಾಯಿತು ಎಂಬುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡು ಅವರನ್ನು ಅಭಿನಂದಿಸಿದರು.
ದಲಿತ ಮುಖಂಡ ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಧರ್ಮಾ ಬಂಗರಗಿ, ಎ. ಸಿಡಿಪಿಒ ಚಂದ್ರಕಾಂತ ಹಿರೇಮಠ, ಹಿರಿಯ ಮೇಲ್ವಿಚಾರಕಿ ಬೇಬಿನಂದಾ ಪಾಟೀಲ, ಸೂರ್ಯಕಾ ಪೂಜಾರಿ, ಭಾಗ್ಯಜೋತಿ, ಮೇಲ್ವಿಚಾರಕಿ ಮಹಾದೇವಿ ವಚ್ಛೆ, ಮೀನಾಕ್ಷಿ ಹಿರೇಮಠ, ಕವಿತಾ ಮುಚ್ಚಳಂಬಿ, ಪದ್ಮಾವತಿ ಪಾಟೀಲ, ಸ್ನೇಹ ಜಾಗಿರದಾರ, ಕಲಾವತಿ, ಲಕ್ಷ್ಮೀ ಗೌಡರ್, ಗೋದಾವತಿ ಪತ್ತಾರ, ತಬಸುಮ್, ಭಾಗಿರಥಿ, ನಂದಾ, ಸಿಬ್ಬಂದಿ ಅಪ್ಪಾಸಾಹೇಬ, ಜೈ ಪ್ರಕಾಶ, ಪ್ರಶಾಂತ ಶರಣಮಠ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಮಾಜ ಮುಖಂಡರು ಸಿಡಿಪಿಒ ಶ್ರೀಕಾಂತ ಮೇಂಗಜಿ ಹಾಗೂ ಅವರ ಪತ್ನಿ ಕವಿತಾ ಮೇಂಗಜಿ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಿದರು.
Comments are closed.