ಗುಂಜಬಬಲಾದ ಶಾಲಾ ಗಿಡಗಳ ಅಕ್ರಮ ತೆರವಿಗೆ 50 ಸಾವಿರ ದಂಡ್
ಹೋರಾಟಗಾರರ ಸಮ್ಮುಖದಲ್ಲೇ ಗಿಡಮರ ನೆಟ್ಟ ಪ್ರಮುಖರು ನಿಟ್ಟುಸಿರು
ಆಳಂದ: ಗುಂಜಬಬಲಾದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಸಸಿನೆಡುವ ಕಾರ್ಯಕ್ರಮದಲ್ಲಿ ಶಾಲೆಯ ಪ್ರಮುಖರು ಹಾಗೂ ವೇದಿಕೆಯ ಮುಖಂಡರು, ವಿದ್ಯಾರ್ಥಿಗಳು ಇದ್ದರು.
ಆಳಂದ: ತಾಲೂಕಿನ ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಗುಂಜಬಬಲಾದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿನ ಈಚೆಗೆ ಗಿಡ, ಮರುಗಳನ್ನು ಅಕ್ರಮವಾಗಿ ಕಡಿದುಹಾಕಿದವರ ಮೇಲೆ ಪ್ರಕರಣ ದಾಖಲಿಸಿದ್ದ ಕಲಬುರಗಿ ಅರಣ್ಯ ಇಲಾಖೆಯ ಸಂಚಾರಿ ದಳದ ಅಧಿಕಾರಿಗಳು ಕೊನೆಗೂ ತಪ್ಪಿತಸ್ಥರಿಗೆ ಸುಮಾರು 50 ಸಾವಿರ ರೂಪಾಯಿ ದಂಡ ವಿಧಿಸಿದü ಘಟನೆ ನಡೆದಿದೆ.
ಕಳೆದ ಜನೆವರಿ 25ರಂದು ಈ ಶಾಲಾ ಆವರಣದಲ್ಲಿ ಗಿಡಮರಗಳನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸಿರುವ ಅಧಿಕಾರಿಗಳು ತಪ್ಪಿತಸ್ಥರಿಂದ ಸುಮಾರು 50 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯಕ್ಕೆ ಚಾರ್ಜ್Àಸೀಟ್ ಸಲ್ಲಿಕೆ ಕ್ರಮ ಮುಂದುವರೆದಿದೆ ಎಂದು ಇಲಾಖೆಯ ಮೂಲಗಳು ಹೇಳಿಕೊಂಡಿವೆ.
ಅಕ್ರಮವಾಗಿ ಗಿಡ ಕಡಿದ ಹಾಕಿದ ಬಗ್ಗೆ ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ರಾಜ್ಯ ಅಧ್ಯಕ್ಷ ಶರಣ ಕುಲಕರ್ಣಿ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಠೋಡ ಅವರು, ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದ ಸ್ಮರಿಸಬಹುದಾಗಿದೆ. ಈ ನಡುವೆ ಅಧಿಕಾರಿಗಳು ದೂರು ಬಂದಿತ್ತು. ಆದರೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಾದ ಮೇಲೆ ಸದ್ಯ ಆರೋಪಿvರು ಬಾಂಡ್ ನೀಡಿ ಠಾಣೆಯ ಜಾಮಿನ ಮೇಲೆ ಬಿಡೆಗಡೆಯಾಗಿದ್ದಾರೆ.
ಗಿಡ ಕಡಿದ ಪ್ರಕರಣದಲ್ಲಿ ಶಾಲೆಯ ಪ್ರಮುಖ ಬಹುತೇಕರೆಲ್ಲರೂ ಶಾಮಿಲಾಗಿದ್ದರಾದರು, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಕರಣದ ಪೂರ್ಣ ಹೊಣೆಹೊತ್ತ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ 50 ಸಾವಿರ ರೂಪಾಯಿ ದಂಡ ಭರಿಸುವಂತಾದ ಪ್ರಕರಣ ನಾಗರಿಕ ವಲಯದಲ್ಲಿ ಎಚ್ಚರಿಕೆ ಘಂಟೆಯಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಈ ಕ್ರಮದಿಂದಾಗಿ ಶಾಲಾ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಜಾರೋಷವಾಗಿ ಗಿಡ, ಮರಗಳನ್ನು ಕಡೆದುಹಾಕುವ ವ್ಯಕ್ತಿಗಳಿಗೆ ತಾಲೂಕಿನಲ್ಲಿ ಕೊಂಚ ಬಿಸಿಮುಟ್ಟಿಸಿದಂತಾಗಿದೆ.
ಆಮಿಷ್ಯಕ್ಕೆ ಒಳಗಾಗದ ಹೋರಾಟಕ್ಕೆ ಜಯ: ಗುಂಜಬಬಲಾದ ಶಾಲಾ ಆವರಣದಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿದು ಹಾಕಿದವರ ವಿರುದ್ಧ ಕ್ರಮಜರುಗಬೇಕು ಎಂದು ದೂರಿನ ಮೂಲಕ ಹೋರಾಟ ನಡೆಸಿದ್ದ ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ಅಧ್ಯಕ್ಷ ಶರಣ ಕುಲಕರ್ಣಿ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಠೋಡರಿಗೆ ಪ್ರಕರಣ ಹಿಂಪಡೆಯುವಂತೆ ಒತ್ತಡ, ಬೆದರಿಕೆ, ಆಮಿಷ್ಯಗಳಂತ ಕಿರುಕುಗಳ ಎದುರಿಸಿದ್ದರು.
ಇದಕ್ಕೆ ಬಗ್ಗದೆ ಅವರ ದಿಟ್ಟ ಹೆಜ್ಜೆಯಿಂದಾಗಿ ಗಿಡ ಕಡಿದವರಿಗೆ ಒಂದಡೆ ದಂಡವು ಭರಿಸುವಂತೆ ಮಾಡಿದ್ದು ಮತ್ತೊಂದಡೆ ತಮ್ಮ ಸಮ್ಮುಖದಲ್ಲೇ ಗಿಡ ಕಡಿದವರಿಂದಲೇ ಶುಕ್ರವಾರ ವಿವಿಧ ಸಸಿಗಳನ್ನು ನಡೆಸುವಂತೆ ಮಾಡಿದ ಅಪರೂಪದ ಘಟನೆಗೆ ಜಯತಂದುಕೊಂಡಿದ್ದು ಇದು ನಮ್ಮ ಗೆಲುವಲ್ಲ ಪರಿಸರ ಗೆಲುವಾಗಿದೆ, ಹೋರಾಟ ವ್ಯಕ್ತಿಗಳ ವಿರುದ್ಧವಲ್ಲ ಎಂದು ವೆಂಕಟೇಶ ರಾಠೋಡ ಹೇಳಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಗಿಡಗಳನ್ನು ಕಡಿದ ಹಾಕಿರುವ ಕುರಿತು ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಹೋರಾಟಗಾರ ಶರಣ ಕುಲಕರ್ಣಿ ಮತ್ತು ವೆಂಕಟೇಶ ರಾಠೋಡ ಅವರು ಸ್ಥಳ ಪರಿಶೀಲಿಸಿ ಸ್ಥಳೀಯ ಪ್ರಾದೇಶಿಕ ಅರಣ್ಯಾಧಿಕಾರಿಗಳಿಗೆ ಸಂಬಂಧಿತರಿಗೆ ಕ್ರಮಕ್ಕೆ ದೂರಿದ್ದರು.
ಆದೆರೆ ದೂರು ಸ್ವೀಕರಿಸಿದ ಅರಣ್ಯಾಧಿಕಾರಿಗಳು ತಮ್ಮ ದೂರಿನ ಮಾಹಿತಿಯೂ ಸೋರಿಕೆ ಬಹಿರಂಗ ಮಾಡಿದ್ದಾರೆ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಬದಲು ದೂರಿನ ಮಾಹಿತಿ ಬಹಿರಂಗ ಮಾಡಿದ್ದರಿಂದ ನಮಗೆ ಬೆದರಿಕೆ ಕರೆಗಳು ಬರುತ್ತಿವೆ, ಎಂದು ಪ್ರತಿಯಾಗಿ ಸ್ಥಳೀಯ ಪ್ರಾದೇಶಿಕ ಅರಣ್ಯ ಅಧಿಕಾರಿಗಳ ವಿರುದ್ಧವೇ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿತು.
ಮತ್ತೊಂದಡೆ ಶಾಲೆಯ ಮುಖ್ಯ ಶಿಕ್ಷPರು ಗಿಡ ಕಡಿಯುವಲ್ಲಿ ನಮ್ಮದೇನು ಪಾತ್ರವಿಲ್ಲ ವೆಂದು ಹೇಳಿಕೊಂಡಾಗ ಶಾಲೆಗೆ ಭೇಟಿ ನೀಡಿ ಹೆಚ್ಚಿನ ಸತ್ಯಾಸತ್ಯತೆ ಅರಿಯಲು ವೆಂಕಟೇಶ ರಾಠೋಡ ಶಾಲೆಗೆ ಹೋದಾಗ ಕೆಲವರು ಬೆನ್ನಟ್ಟಿ ಓಡಿಸಿ ಮತ್ತೊಮ್ಮೆ ಬಂದರೆ ಪರಿಸ್ಥಿತಿ ನೆಟ್ಟಿಗಿರಲ್ಲ ಎಂದಿದ್ದರಂತೆ, ವೆಂಕಟೇಶ ಇಷ್ಟಕ್ಕೆ ನಿಲ್ಲದೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಲೇಬೇಕು ಎಂದು ಮೇಲಾಧಿಕಾರಿಗಳಿಗೆ ದೂರಿ ಕೋರ್ಟ್ ಮೋರೆಹೋಗಲು ಮುಂದಾಗಿದ್ದರು.
ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಎಸ್ಡಿಎಂಸಿ ಅಧ್ಯಕ್ಷರು, ದಂಡ ಭರಿಸುತ್ತೇವೆ ನಿಮ್ಮ ಸಮ್ಮುಖದಲ್ಲೇ ಸಸಿಗಳು ನಡೆಸೋಣಾ ಎಂದು ಶುಕ್ರವಾರ ಶಾಲಾ ಆವರಣದಲ್ಲಿ ಸರ್ವರು ಸೇರಿ ಮನಸ್ಥಾಪ ಮರೆತು ವಿವಿಧ ಸಸಿಗಳನ್ನು ನೆಟ್ಟು ಸಂಭ್ರಮಿಸಿದ ಕ್ಷಣ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಎಸ್ಡಿಎಂಸಿಯವರು ನೆಮ್ಮದಿ ನಿಟ್ಟುಸಿರುಬಿಟ್ಟ ಗಳಿಗೆ ಸಾರ್ವಜನಿಕ ವಲಯದಲ್ಲಿ ಚರ್ಚಿಸುವಂತಾಗಿದೆ.