Shubhashaya News

ತೊಗರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

ಆಳಂದ್: ರೈತಪರ ಬೇಡಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಘಟಕದ ಮುಖಂಡರು ರಾಜ್ಯ ಸರ್ಕಾರಕ್ಕೆ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮೌಲಾ ಮುಲ್ಲಾ, ರಮೇಶ್ ಲೋಹ , ಪ್ರಕಾಶ್ ಜಾನಿ ,ರವಿ ಪಾಟೀಲ್, ಚಂದ್ರಕಾಂತ್ ಸೇರಿ ಮುಂತಾದವರು ಇದ್ದರು.

ಆಳಂದ: ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಿ ಕನಿಷ್ಠ ಬೆಂಬಲ ಬೆಲೆ 12225 ರೂಪಾಯಿಗೆ ಖರೀದಿಸಲು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಘಟಕದಿಂದ ಪಟ್ಟಣದ ತಾಲೂಕ ಆಡಳಿತ ಮುಂದೆ ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟಗಾರ ರಮೇಶ್ ಲೋಹಾರ್ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸಬೇಕು ರೈತರಿಗೆ ಬೆಂಬಲ ಬೆಲೆ ಸೇರಿ ಯಾವುದೇ ರೈತ ಪರ ಯೋಜನೆಗಳು ಅನುμÁ್ಠನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಗರಿಗೆ ಬೆಂಬಲ ಬೆಲೆಯನ್ನು ಘೋಷಿಸಿ ರೈತರ ಸಹಾಯಕ್ಕೆ ಬಂದಾಗ ಮಾತ್ರ ರೈತ ಉಳಿಯಲು ಸಾಧ್ಯ ಇಲ್ದಿದ್ದರೆ ಮತ್ತೆ ರೈತನಿಗೆ ಅದೇ ಆತ್ಮಹತ್ಯೆ ಗತಿ ನಿರ್ಮಾಣವಾಗಬಾರದು ಎಂದು ಹೇಳಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಕಾರ್ಯದರ್ಶಿ ಮೌಲಾಮುಲಾ ಅವರು ಮಾತನಾಡಿ , ಈ ವರ್ಷ ನೈಸರ್ಗಿಕ ವಿಕೋಪ ಮತ್ತು ತೊಗರಿಗೆ ನೆಟೆರೋಗ ಬಿದ್ದಿದ್ದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಧಾವಿಸಬೇಕಿದ್ದ ಕೇಂದ್ರ ಸರ್ಕಾರ ಅವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಿದ್ದು ತುಂಬಾ ಆತಂಕ ಕಾರ್ಯ ವಿಷಯವಾಗಿದೆ ಎಂದು ಆಕ್ರೋಶ ಹಾಕಿದರು.
ರೈತರ ಪರ ಬೇಡಿಕೆಗೆ ಒತ್ತಾಯಿಸಿ ಜಗದೀಸಿಂಗ್ ದಲ್ಲೇ ವಾಲ ಅವರು 50 ದಿನದಿಂದ ಉಪವಾಸ ಸತ್ಯಾಗ್ರ ಕುಳಿತರು ಕೂಡ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ, ಕಾರಣ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಲಾ ಎರಡು ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಿ ಒಟ್ಟು 12225 ರೂಪಾಯಿ ಪ್ರತಿಕುಂಟಾಲ್ ತೊಗರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ದೇಶದ ರೈತರನ್ನು ಸಂಪೂರ್ಣವಾಗಿ ಸಶಕ್ತಗೊಳಿಸಲು ಅದಕ್ಕಾಗಿ ರೈತರ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಸಮಗ್ರವಾಗಿ ಜಾರಿಗೊಳಿಸಬೇಕು. ಈ ವಿಷಯದಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಕಲಬುರ್ಗಿಯಲ್ಲಿ ಜ.22ರಂದು ಬಂದ ಕರೆ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತರ ಹೋರಾಟಕ್ಕೆ ಸರ್ಕಾರಗಳು ಪ್ರತಿಕ್ರಿಯೆಸುತ್ತಿಲ್ಲ ಸಂಬಂಧಿತ ಸಚಿವರು ಪ್ರಧಾನ ಮಂತ್ರಿಗಳು ಯಾವುದೇ ಚಕಾರ ಎತ್ತುತ್ತಿಲ್ಲ ಟಿವಿ ಪತ್ರಿಕೆ ಗಳ ಮೂಲಕವಾದರೂ ಸ್ಪಂದಿಸುವ ಹೇಳಿಕೆಗಳು ನೀಡುತ್ತಿಲ್ಲ ನೀಡುವ ಮನವಿಗಳು ಮನವಿಗಳಾಗಿ ಉಳಿಯುತ್ತೇವೆ ಎಂದು ಅವರು ಕಿಡಿಕಾರಿದರು.
ಸ್ಥಳಕ್ಕೆ ಆಗಮಿಸಿದ ಗ್ರೇಟು ತಸಿಲ್ದಾರ್ ಬಿ.ಜಿ .ಕುದುರೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಸಭಾ ತಾಲೂಕ ಅಧ್ಯಕ್ಷ ಚಂದ್ರಕಾಂತ್ ಕೋಬ್ರೆ, ಹಿರಿಯ ಮುಖಂಡ ರವಿ ಪಾಟೀಲ್ ಆಳಂಗ, ಪ್ರಭಾಕರ್ ಚವಾಣ್, ಪ್ರಾಂತ ರೈತ ಸಂಘದ ಪ್ರಕಾಶ್ ಜಾನಿ ,ಅಮೀನ್ ಸಾಬ್ ಕಂಡು ವಾಲಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Leave A Reply

Your email address will not be published.