Shubhashaya News

ಪಾಯ ಅಗೆವಾಗ ಆಳಂದನಲ್ಲಿ ಶಿವಲಿಂಗ ಪತ್ತೆ: ನೋಡಲು ಜನಹಿಂಡು

ಆಳಂದ: ಪಟ್ಟಣದ ಪುರಸಭೆಗೆ ಸಂಬಂಧಿತ ನಿವೇಶದನಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಪಾಯ ಅಗೆಯುವಾಗ ಶಿವಲಿಂಗ ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಭೇಟಿ ನೀಡಿ ವೀಕ್ಷಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ ಇತರರು ಇದ್ದರು.

ಆಳಂದ: ಪತ್ತೆಯಾದ ಶೀಲಾ ಕೆತ್ತನೆಯ ಶಿವಲಿಂಗಕ್ಕೆ ಪೂಜೆ ನೆರವೇರಿಸಲಾಯಿತು.

ಆಳಂದ: ಪುರಸಭೆಯಿಂದ 10 ಲಕ್ಷ ಲೀಟರ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಳಪಾಯ ತೆಗೆಯುತ್ತಿದ್ದಾಗ ಶಿಲಾ ಕೆತ್ತನೆಯ ಶಿವಲಿಂಗ ದೊರೆತ ಅಪರೋಪದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಇಲ್ಲಿನ ಬಸ್ ನಿಲ್ದಾಣ ಮಾರ್ಗದ ಎಸ್‍ಆರ್‍ಜಿ ಶಾಲಾ ಹಿಂಬದಿಯ ಬಡಾವಣೆಯಲ್ಲಿನ ಆಪೇಕ್ಸ್ ಸ್ಕೂಲ್ ಹಿಂಬದಿಯ ಪುರಸಭೆ ಗಾರ್ಡ್‍ನ ನಿವೇಶನದಲ್ಲಿ ಪುರಸಭೆಯಿಂದ ನೀರಿನ ಟ್ಯಾಂಕ್ ಕಟ್ಟಲು ಜೆಸಿಬಿ ಯಂತ್ರದಿಂದ ತಳಪಾಯ ಅಗೆಯುವಾಗ ಶಿವಲಿಂಗ ದೊರೆತ್ತಿದ್ದು, ಸುದ್ದಿ ಹರಡುತ್ತಿದ್ದಂತೆ ನೋಡಲು ಜನ ತಂಡೋಪ, ತಂಡವಾಗಿ ದೌಡಾಹಿಸಿ ವೀಕ್ಷಿಸಿ ದರ್ಶನ ಪಡೆದರು.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಸಹ ಭೇಟಿ ನೀಡಿ ಸ್ಥಳವನ್ನು ವೀಕ್ಷಿಸಿ ಪತ್ತೆಯಾದ ಶಿವಲಿಂಗದ ದರ್ಶನ ಕೈಗೊಂಡರು. ಇದೇ ವೇಳೆ ಪ್ರತಿಕ್ರಿಯೆಸಿದ ಗುತ್ತೇದಾರ ಅವರು, ಪುರಸಭೆ ನಿವೇಶನದಲ್ಲಿ ನೀರಿನ ಟ್ಯಾಂಕ್ ಕಟ್ಟಲು ಪಾಯ ಅಗೆಯುವಾಗ ಶಿವಲಿಂಗ ದೊರೆತ್ತಿದೆ. ಈ ಕುರಿತು ತಜ್ಞರನ್ನು ಕರೆಯಿಸಿ ಯಾವ ದೇವಸ್ಥಾನವಿತ್ತು. ಶಿವಲಿಂಗದ ಮಾಹಿತಿ ಅಧ್ಯಯನ ನಡೆಯಬೇಕು. ದೊರೆತ ಲಿಂಗವನ್ನು ಹೀಗೆ ಬಿಡದೆ ಇದಕ್ಕೆ ಸಂರಕ್ಷಿಸಲು ಗುಡಿಕಟ್ಟೋಣಾ, ಅಲ್ಲಿಯವರೆಗೂ ಪೊಲೀಸರು ಸಂರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಆನಂದ ಪಾಟೀಲ, ಸಿದ್ಧಯ್ಯಾ ಸ್ವಾಮಿ ಖಂಡಾಳ, ಚಂದ್ರಕಾಂತ ಭೂಸನೂರ ಕಡಗಂಚಿ, ಎಸ್.ಎಚ್. ಗೋಧೆ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಆಗಮಿಸಿದ್ದರು.
ಮುಖ್ಯಾಧಿಕಾರಿ ಸ್ಪಷ್ಟನೆ: ಈ ಕುರಿತು ಸ್ಥಳದಲ್ಲಿ ಆಗಮಿಸಿದ್ದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಅವರು ಮಾತನಾಡಿ, ಪತ್ತೆಯಾದ ಶಿವಲಿಂಗದ ಕುರಿತು ಜನಾಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗುವುದು. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಕ್ರಮವಹಿಸಲಾಗುವುದು. ಆರ್ಕೇಲೋಜಿ ಡಿಪಾರ್ಟ್‍ಮೆಂಟ್‍ನವರನ್ನು ಕರೆಯಿಸಿ ಪರಿಶೀಲನೆ ವಹಿಸಿ ಅವರ ವರದಿಯಂತೆ ಮುಂದಿನ ತೀರ್ಮಾನ ಮತ್ತು ಮುಂದಿನ ಕ್ರಮದವರೆಗೆ ಸೂಕ್ತಸ್ಥಳವಾದ ದೇವಸ್ಥಾವೊಂದರಲ್ಲಿ ಲಿಂಗವನ್ನು ಇಡಬೇಕೆಂದಿದ್ದೇನೆ ಈ ಕುರಿತು ಚರ್ಚೆ ನಡೆದಿದೆ ಎಂದರು.

Leave A Reply

Your email address will not be published.