Shubhashaya News

ಗಡಿನಾಡಿನ ಬಾಂಧವ್ಯ ಮೂಡಿಸುವ ಕೇಸರ ಜವಳಗಾ ಶ್ರೀಮಠ

ಆಳಂದ: ಕೇಸರ ಜವಳಗಾ ಶ್ರೀ ಜಡಿಬಸವಲಿಂಗ ವಿರಕ್ತ ಮಠದಲ್ಲಿ ಧಾರ್ಮಿಕ ಗುರುಗಳ ಪ್ರತಿಮೆಗಳು ಸ್ಥಾಪನೆ ನಡೆಯಿತು.

ಆಳಂದ: ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳ ಗಡಿನಾಡಿನಲ್ಲಿ ಜನರ ಮತ್ತು ಮಠಾಧೀಶರ ಸಮಾಗಮ ಮತ್ತು ಬಾಂದ್ಯವ್ಯದ ಐಕ್ಯತೆ ಮೂಡಿಸುತ್ತಾ ಬಂದಿರುವ ನೆರೆಯ ಕೇಸರ ಜವಳಗಾ ಶ್ರೀ ಜಡಿಬಸವಲಿಂಗ ವಿರಕ್ತ ಮಠವು ಈಗ ಮತ್ತೊಮ್ಮೆ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯPಮÀ್ರ ನೆರವೇರಿಸಿ ಬುಧವಾರ ಸಂಪನ್ನಗೊಳಿಸುವ ಮೂಲಕ ತನ್ನ ಐತಿಹಾಸಿಕ ಖ್ಯಾತಿಯನ್ನು ಮರುಕಳಿಸಿತು.
ಮಠದ ಶ್ರೀ ಪೀಠಾಧಿಪತಿ ವೀರಂತೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಭಕ್ತಾದಿಗಳು ಶ್ರೀ ಜಡಿಬಸವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಬೆಳ್ಳಿ ಮೋಹತ್ಸವ ಹಮ್ಮಿಕೊಂಡು ಕನ್ನಡ ಮತ್ತು ಮರಾಠಿ ಶಿಕ್ಷಣ, ಶಾಲೆಯ ಶೈಕ್ಷಣಿಕ ಉತ್ಸವ ನೆರವೇರಿಸಿದರು.
ಶ್ರೀಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ, ಶ್ರೀ ವಿಶ್ವಾರಾಧ್ಯ, ಶ್ರೀ ಜಗಜ್ಜ್ಯೋತಿ ಬಸವೇಶ್ವರ ಮತ್ತು ಶ್ರೀ ಹಾನಗಲ್ ಗುರುಕುಮಾರೇಶ್ವರ, ಶ್ರೀ ವೀರಂತೇಶ್ವರ ಹಾಗೂ ಶ್ರೀ ಜಡಿಬಸವಲಿಂಗೇಶ್ವರ ಅಮೃತ ಶಿಲಾಮೂರ್ತಿ ಪ್ರತಿμÁ್ಠಪನೆ, ಅನಾವರಣ ಮತ್ತು ಶ್ರೀಮಠದ ಮೂಲಕರ್ತೃ ಶ್ರೀ ಜಡಿಬಸವಲಿಂಗೇಶ್ವರ ಹಾಗೂ ಲಿಂ. ಶ್ರೀ ಜಡಿಬಸವಲಿಂಗೇಶ್ವರ ಚಿನ್ನದ ಮೂರ್ತಿ ಸ್ಥಾಪನೆ, ಗುಡ್ಡಾಪುರ ಶ್ರೀ ದಾನಮ್ಮಾದೇವಿ ಪುರಾಣ, ಲಕ್ಷದೀಪೆÇೀತ್ಸವ, ಶಿವದೀಕ್ಷೆ, ಜಂಗಮ ವಟುಗಳಿಗೆ ಅಯ್ಯಾಚಾರ, ಕುಂಭಮೇಳ, ಆರೋಗ್ಯ ಶಿಬಿರ, ಪಲ್ಲಕ್ಕಿ ಮೆರವಣಿಗೆಯಂತ ಈ ಐತಿಹಾಸಿಕ ಸಾಗಿದ ಕಾರ್ಯಕ್ರಮಕ್ಕೆ ಗಡಿನಾಡಿನ ಎರಡೂ ರಾಜ್ಯಗಳ ಭಕ್ತರು, ಸರಣಿ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳು ಸೇರಿ ಪ್ರತಿಷ್ಠಿತ ಮಠಾಧೀಶರು, ರಾಜಕೀಯ ಧುರೀಣರು ಪಾಲ್ಗೊಂಡು ಉತ್ಸವಕ್ಕೆ ಸಾಕ್ಷಿಯಾದರು. ಸಾಧಕರಿಗೆ ದಾಸೋಹಿಗಳಿಗೆ ಶ್ರೀಮಠದ ಗೌರವ ಸನ್ಮಾನ ನೀಡಲಾಯಿತು.
ಬುಧವಾರ ಕೇಸರ ಜವಳಗಾ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಶ್ರೀಮಠದ ಪಲ್ಲಕ್ಕಿ ಉತ್ಸವ ಹಾಗೂ ಸಮಾರೋಪ ಸಮಾರಂಭದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮದ ಮೂಲಕ ಬುಧವಾರ ಕಾರ್ಯಕ್ರಮಕ್ಕೆ ಮಹಾಮಂಗಲ ಕೈಗೊಳ್ಳಲಾಯಿತು.
ಎರಡೂ ರಾಜ್ಯಗಳ ಗಡಿನಾಡಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಮಠದ ಕತ್ರ್ಯ ಶ್ರೀಗಳ ಮತ್ತು ಪೀಠಾಧಿಪತಿ ಶ್ರೀ ವೀರಂತೇಶ್ವರ ಮಹಾಸ್ವಾಮಿಗಳ ಹಾಗೂ ಆಗಮಿಸಿದ್ದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವು ಪ್ರತಿಷ್ಠಿತ ಮಠಾಧೀಶರ ದರ್ಶನಾಶೀರ್ವಾದ ಪಡೆದರು.

Leave A Reply

Your email address will not be published.