Shubhashaya News

ಅಸ್ಪೃಶ್ಯತೆಯ ನಿರ್ಮೂಲನೆಗೆ ಜಾಗೃತಿ ಅಗತ್ಯ:

ಆಳಂದ: ನಿಂಬರಗಾದಲ್ಲಿ ನಡೆದ ಅಸ್ಪಶೃತಾ ನಿರ್ಮೂಲನೆ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷೆ ರೇಖಾ ಚವ್ಹಾಣ ಉದ್ಘಾಟಿಸಿದರು. ಯಲ್ಲಪ್ಪ ದೊಡ್ಡಮನಿ ಇತರರು ಇದ್ದರು.

ಆಳಂದ: ತಾಲೂಕ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ, ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ನಿಂಬರ್ಗಾ ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ರೇಖಾ ರಮೇಶ ಚವ್ಹಾಣ, “ಅಸ್ಪೃಶ್ಯತೆ ಎಂಬುದು ಒಂದು ಸಾಮಾಜಿಕ ಪಿಡುಗು. ಇದನ್ನು ಬೇರು ಸಮೇತ ಕಿತ್ತೆಸೆಯಲು ತಾವೆಲ್ಲರೂ ಮುಂಚೂಣಿಯಲ್ಲಿರಬೇಕು,” ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಅವರು ಮಾತನಾಡಿ, ಆಗಮಿಸಿದ್ದ “ವಿದ್ಯಾರ್ಥಿಗಳಾದ ನೀವು ಬುದ್ಧ, ಬಸವ, ಸಾಮ್ರಾಟ್ ಅಶೋಕ, ಡಾ. ಬಿ.ಆರ್. ಅಂಬೇಡ್ಕರ್, ರಮಾಬಾಯಿ ಅಂಬೇಡ್ಕರ್, ಸಾಹು ಮಹಾರಾಜ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಪೇರಿಯಾರ್ ರಾಮಸ್ವಾಮಿ ಮುಂತಾದ ಮಹನೀಯರ ವಿಚಾರ ದಾರೆಯನ್ನು ಮೈಗೂಡಿಸಿಕೊಳ್ಳಬೇಕು,” ಎಂದರು.

ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಂಕರ ಡಾಂಗೆ, ಬಾಬುರಾವ್ ಮೇಟೇಕಾರ, ಸಿದ್ರಾಮಪ್ಪ ಯಂಕಂಚಿ, ಶಾಂತರಸ ಸೇರಿದಂತೆ ಹಲವು ಗಣ್ಯರು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.
ಕಲ್ಯಾಣಿ ನಿರ್ಮಲಕರ್, ಶಶಿಕುಮಾರ ಶಹಾಬಾದ್ ಮತ್ತು ಕಾಲೇಜು ಸಹ ಉಪನ್ಯಾಸಕರು, ಶಾಲೆಯ ಸಹ ಶಿಕ್ಷಕರು, ಗ್ರಾಮ ಪಂಚಾಯತಿ ಸಿಬ್ಬಂದಿ, ಹಿರಿಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಯುವಕರು ಮತ್ತು ನೂರಾರು ಜನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದತ್ತ ಖರ್ಚನ್ ನಿರೂಪಣೆ ನಡೆಸಿ, ವಂದಿಸಿದರು.

Leave A Reply

Your email address will not be published.