ಆಳಂದ: ಪಂಚಮಸಾಲಿ ಹೋರಾಟಕ್ಕೆ ಬೆಂಬಲಿಸಿ ಹಾಗೂ ಬೆಳಗಾವಿಯಲ್ಲಿ ಹೋರಾಟಗಾರರ ಮೇಲೆ ರಾಠಿ ಪ್ರಹಾರ ನಡೆಸಿದ ರಾಜ್ಯ ಸರ್ಕಾರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಲಿಂಗಾಯತ ಪಂಚಮಸಾಲಿ ಸಂಘಟನೆಯ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕೂಡಲಸಂಗಮ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ- ದೀಕ್ಷಾ ಮಲೆಗೌಡ- -ಗೌಡಲಿಂಗಾಯತರಿಗೆ ಮೀಸಲಾತಿ ಹಾಗೂ ಲಿಂಗಾಯತ ಔಃಅ ಮೀಸಲಾತಿ ಬೇಡಿಕೆಯ ಚಳುವಳಿಗಾರರ ಮೇಲೆ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೆಳಗಾವಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿದೆ ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜ ಯುವ ಘಟಕದ ಅಧ್ಯಕ್ಷ ಆನಂದ ಎಸ್. ದೇಶಮುಖ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಿದರು.
ಬೆಳಗಾವಿಯಲ್ಲಿ ಪಂಚಮಸಾಲಿ ಬಾಂಧವರು ರಸ್ತೆ ತಡೆ ಚಳುವಳಿ ಹಾಗೂ ಬೃಹತ್ ಪ್ರತಿಭಟನೆ ಲಾಠಿಚಾರ್ಜ್ ಗೊಳಿಸಿದÀ ಸಿಎಂ ಸಿದ್ದರಾಮಯ್ಯನವರನ್ನು ಹಾಗೂ ಎಡಿಜಿಪಿ ಪೆÇಲೀಸ್ ಅಧಿಕಾರಿ ಇತಿಇಂದ್ರ ರವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹೋರಾಟದ ವೇಳೆ ಪೆÇಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸುಮಾರು ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ನೂರುಕ್ಕೂ ಹೆಚ್ಚು ಹೋರಾಟಗಾರರ ಜೀವನ ಚಿಂತಾ ಜನಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಕೋಟ್ಯಾಂತರ ಜನರು ದುಃಖವನ್ನು ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
12 ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಂಚಣ್ಣ ಲಿಂಗಾಯತರ ಮೇಲೆ ಹತ್ಯೆ ಮಾಡಿಸಿದ್ದರು, ಅದೇ ರೀತಿಯಾಗಿ ಇಂದು ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಹಾಗೂ ಲಾಠಿಚಾರ್ಜ್ ಮಾಡಿಸಿ ನಮ್ಮ ರಕ್ತ ಹರಿಸಿದ್ದಾರೆ, ಇಂತಹ ಕ್ರೂರ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಲಿಂಗಾಯತರ ಹೋರಾಟ ಹತ್ತಿಕ್ಕುವ ಹುನ್ನಾರದ ರೂವಾರಿ ಸಿ.ಎಂ. ಸಿದ್ದರಾಮಯ್ಯನವರೇ ಆಗಿದ್ದಾರೆ, ಪೆÇಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆರ್.ಹಿತೇಂದ್ರ ರವರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು ಒತ್ತಾಯಿಸಿದರು.
ಈ ವೇಳೆ ಸಮಾಜ ಯುವ ಘಟಕದ ಅಧ್ಯಕ್ಷ ಆನಂದ ಎಸ್. ದೇಶಮುಖ, ಬಸವಸೇನೆ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಎಂ. ಪಾಟೀಲ, ಚನ್ನಪ್ಪ ಹತ್ತರಕಿ, ಅಶೋಕ ಹತ್ತರಕಿ, ಗುರು ಪಾಟೀಲ ಹಳ್ಳಿಸಲಗರ ಸೇರಿದಂತೆ ಅನೇಕರಿದ್ದರು.

ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಅಧ್ಯಕ್ಷ ಮಹಾದೇವ ಹತ್ತಿ ನೇತೃತ್ವದಲ್ಲಿ ಮುಖಂಡ ರೇವಣಸಿದ್ಧಪ್ಪ ನಾಗೂರೆ, ರಘಪ್ಪ ಎಸ್. ಹತ್ತರಕಿ, ಸೋಮಶೇಖರ ಹತ್ತರಕಿ, ಅಶೋಕ ಎಸ್. ಹತ್ತರಕಿ, ಶ್ರೀಶೈಲ ಬಿ. ಕರಲಗಿ, ಲಕ್ಷ್ಮೀಕಾಂತ ವಿ. ಭೂಸನೂರ, ಶ್ರೀಶೈಲ ಖಜೂರಿ, ಸಿದ್ಧುಗೌಡ ಹಿರೋಳಿ ಮತ್ತಿತರು ನೇತೃತ್ವದಲ್ಲಿ ಪ್ರತಿಭನೆ ಕೈಗೊಂಡು ಪ್ರತ್ಯೇಕ ಮನವಿ ಸಲ್ಲಿಸಿದರು.
ನಿರಗುಡಿ ಗ್ರಾಮದಲ್ಲಿ ಪಂಚಮಸಾಲಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟಾಯರಗೆ ಬೆಂಕಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಮುಖಂಡ ಅಪ್ಪಾರಾವ ದೇಶಮುಖ, ರಾಹುಲ್ ಮೂಲಗೆ, ಚಂದು ಮೂಲಗೆ, ಶರಣಪ್ಪ ಬಿರಾದಾರ ಮತ್ತು ಅಪ್ಪು ಕೋರೆ ಸೇರಿದಂತೆ ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.