Shubhashaya News

ಬಬಲೇಶ್ವರ: ಭರದಿಂದ ಸಾಗಿದ ಸಿಸಿ ರಸ್ತೆಯ ಕಾಮಗಾರಿ

ಆಳಂದ ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಇತ್ತೀಚಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರಿಂದ ಪ್ರಾರಂಭಗೊಂಡಿದ್ದ ಸಿಸಿ ರಸ್ತೆಯ ಕಾಮಗಾರಿ ಭರದಿಂದ ಆರಂಭಗೊಂಡಿದೆ.
ಸುಮಾರು 50 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರುತ್ತದೆ. ಕಾಮಗಾರಿಯು ಗ್ರಾಮದ ಮೂಲೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಜರುಗಲಿದೆ. ಈ ರಸ್ತೆಯ ನಿರ್ಮಾಣಕ್ಕಾಗಿ ಗ್ರಾಮಸ್ಥರು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು. ಈ ರಸ್ತೆಯ ನಿರ್ಮಾಣದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಅಪಾರವಾದ ಅನೂಕೂಲವನ್ನುಂಟು ಮಾಡಲಿದೆ.

Leave A Reply

Your email address will not be published.